ಭಾರತೀಯ ಅಥ್ಲೆಟ್ ಗಳು ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಚೀನಾದಲ್ಲಿ ನಡೆದ ಸ್ಪೀಡ್ ಸ್ಕೇಟಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (Skating World Champion) 22 ವರ್ಷದ ಆನಂದ್ ಕುಮಾರ್ ವೇಲ್‌ಕುಮಾರ್ ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ರಚಿಸಿದ್ದಾರೆ. ಈ ಮೂಲಕ ಸ್ಕೇಟಿಂಗ್ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಮೊದಲ ಭಾರತೀಯ ಎಂದು ಆನಂದ್ ಹೆಸರಾಗಿದ್ದಾರೆ.
ಪುರುಷರ ಸೀನಿಯರ್ 1000 ಮೀಟರ್ ಸ್ಪ್ರಿಂಟ್ ಸ್ಪರ್ಧೆಯ ಫೈನಲ್‌ನಲ್ಲಿ ಆನಂದ್ ಕುಮಾರ್ ತಮ್ಮ ನಿಗದಿತ ದೂರವನ್ನು 1:24.924 ಸೆಕೆಂಡುಗಳಲ್ಲಿ ಪೂರೈಸಿ ಚಿನ್ನವನ್ನು ಜಯಿಸಿದ್ದಾರೆ ಮತ್ತು ವಿಶ್ವ ಚಾಂಪಿಯನ್ ಪಟ್ಟವನ್ನು ಕೂಡ ಗೆದ್ದಿದ್ದಾರೆ.
ಮುಂಬರುವ 500 ಮೀಟರ್ ಸ್ಪ್ರಿಂಟ್‌ನಲ್ಲಿ ಆನಂದ್ 43.072 ಸೆಕೆಂಡುಗಳಲ್ಲಿ ಚಿನ್ನದ ಪದಕ ಗೆದ್ದಿದ್ದು, ಭಾರತ ಪರ ಮೊದಲ ಸೀನಿಯರ್ ಪದಕವನ್ನು ಭಾರತದ ಹೆಸರಿನಲ್ಲಿ ಸಾಧಿಸಿದ್ದಾರೆ. ಜೂನಿಯರ್ ವಿಭಾಗದಲ್ಲಿ ಭಾರತೀಯ ಕ್ರಿಶ್ ಶರ್ಮಾ 1000 ಮೀಟರ್ ಸ್ಪ್ರಿಂಟ್‌ನಲ್ಲಿ ಚಿನ್ನದ ಸಾಧನೆ ಮಾಡಿ, ಭಾರತ ಡಬಲ್ ಚಿನ್ನದ ಸಾಧನೆ ಮಾಡಿದೆ.
ಆನಂದ್ ಕುಮಾರ್ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಪ್ರತಿಭೆಯು. ಈ ವರ್ಷದ ಆರಂಭದಲ್ಲಿ ನಡೆದ ವಿಶ್ವ ಕ್ರೀಡಾಕೂಟದಲ್ಲಿ ಅವರು 1000 ಮೀಟರ್ ಸ್ಪ್ರಿಂಟ್‌ನಲ್ಲಿ ಕಂಚಿನ ಪದಕ ಗೆದ್ದು, ರೋಲರ್ ಕ್ರೀಡೆಗಳಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದಿದ್ದರು.
ಆನಂದ್ ಕುಮಾರದ ಸಾಧನೆ ರಾಷ್ಟ್ರಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಸಹ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ಆನಂದ್ ಕುಮಾರ್ ತಾಳ್ಮೆ, ವೇಗ ಮತ್ತು ಉತ್ಸಾಹದಿಂದ ಭಾರತದ ಮೊದಲ ವಿಶ್ವ ಚಾಂಪಿಯನ್ ಆಗಿದ್ದಾರೆ. ಅವರ ಸಾಧನೆ ಅನೇಕ ಯುವಕರಿಗೆ ಪ್ರೇರಣೆಯಾಗಿದೆ.