ರಾಜ್ಯದ ಯುವಕರಿಗೆ “ನಿಪುಣ ಕರ್ನಾಟಕ” (Nipuna Karnataka) ಯೋಜನೆಯಡಿ ಹೊಸ ಕನಸು ಕಟ್ಟುವ ಯೋಜನೆ ಪ್ರಾರಂಭವಾಗಿದೆ. ತಂತ್ರಜ್ಞಾನ ದೈತ್ಯ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು 1 ಲಕ್ಷ ಯುವಕರಿಗೆ ತರಬೇತಿ ಮತ್ತು ಶೇ.70 ರಷ್ಟು ಉದ್ಯೋಗದ ಭರವಸೆ ನೀಡಲಾಗಿದೆ.
ಐದು ಟೆಕ್ ಕಂಪನಿಗಳ ಜೊತೆ ಒಪ್ಪಂದ. ಮೈಕ್ರೋಸಾಫ್ಟ್, ಇಂಟೆಲ್, ಐಬಿಎಂ, ಅಕ್ಸೆಂಚರ್, ಬಿಎಫ್ಎಸ್ಐ ಕನ್ಸಾರ್ಟಿಯಂ ಕಂಪನಿಗಳೊಂದಿಗೆ ಒಪ್ಪಂದ. ಬಲಿಷ್ಠ ತರಬೇತಿ ಸೌಲಭ್ಯಗಳೊಂದಿಗೆ 1 ಲಕ್ಷ ಯುವಕರಿಗೆ ತಂತ್ರಜ್ಞಾನ ಕೌಶಲ್ಯಗಳನ್ನು ಬೆಳೆಸಲು ಗುರಿ.
ತಂತ್ರಜ್ಞಾನ ತರಬೇತಿ
- ಐಬಿಎಂ: 50,000 ಮಂದಿಗೆ ಎಐ ಮತ್ತು ಕ್ಲೌಡ್.
- ಇಂಟೆಲ್: 20,000 ಮಂದಿಗೆ ಎಐ.
- ಮೈಕ್ರೋಸಾಫ್ಟ್: 10,000 ಮಂದಿಗೆ ಡೀಪ್ ಟೆಕ್.
- ಅಕ್ಸೆಂಚರ್: 10,000 ಮಂದಿಗೆ ಇಮರ್ಜಿಂಗ್ ಟೆಕ್ನಾಲಜಿ.
- ಬಿಎಫ್ಎಸ್ಐ: 10,000 ಮಂದಿಗೆ ಹಣಕಾಸು ತಂತ್ರಜ್ಞಾನ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ‘ಬೆಂಗಳೂರು ಟೆಕ್ ಸಮಿಟ್ 2024’ ಕಾರ್ಯಕ್ರಮ ನಡೆಯಲಿದೆ.
ಅಮೆರಿಕ, ರಷ್ಯಾ, ಕೊರಿಯಾ, ಜಪಾನ್, ಇಸ್ರೇಲ್, ಆಸ್ಟ್ರೇಲಿಯಾ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳ ಟೆಕ್ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮಾಡಲಿವೆ.
ರಾಜ್ಯ ಸರ್ಕಾರದ ಜೊತೆಗೆ ಒಪ್ಪಂದಗಳು ಮಾತ್ರವಲ್ಲದೆ, ವಿವಿಧ ವರ್ಕ್ಶಾಪ್, ಪ್ರಾಡಕ್ಟ್ ಬಿಡುಗಡೆ, ಸೆಮಿನಾರ್ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಲಿವೆ.
ಮೂರು ದಿನಗಳ ಈ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ. ಟೆಕ್ ಕಂಪನಿಗಳ ಹೊಸ ಉತ್ಪನ್ನಗಳು, ಗ್ಲೋಬಲ್ ಸಮ್ಮೇಳನಗಳು, ಸೈಬರ್ ಸುರಕ್ಷೆ, ಮತ್ತು ಎಐ ಪ್ರಭಾವದ ಚರ್ಚೆಗಳು.
ಈ ಯೋಜನೆ ಕರ್ನಾಟಕದ ಯುವಕರಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ ಜೀವನಕ್ಕಾಗಿ ಹೊಸ ಮಾರ್ಗ ತೆರೆದು, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಹುದಾದ ಸ್ಥಾನವನ್ನು ನೀಡಲಿದೆ.