
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಎಲ್ಲಾ ಜಾತಿ, ಉಪಜಾತಿ, ಅನುಸೂಚಿತ ಜಾತಿ ಮತ್ತು ಪಂಗಡಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (Socio-Educational Survey) ನಡೆಸುತ್ತಿದೆ.
ಯಾವುದೇ ಜಾತಿ ಅಥವಾ ಉಪಜಾತಿ ಪಟ್ಟಿ ತಪ್ಪಿದರೆ, ಮಾಹಿತಿ ನೀಡಲು ಸೆಪ್ಟೆಂಬರ್ 1, 2025ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.
ಮೂಲತಃ ಆಗಸ್ಟ್ 22ರೊಳಗೆ ಮಾಹಿತಿ ನೀಡಲು ಕೋರಲಾಗಿತ್ತು. ಆದರೆ ಸಾರ್ವಜನಿಕರು ಹಾಗೂ ಸಂಘಟನೆಗಳು ಹೆಚ್ಚು ಸಮಯ ಬೇಕೆಂದು ಮನವಿ ಮಾಡಿದ ಕಾರಣದಿಂದ, ಸೆಪ್ಟೆಂಬರ್ 1ರಂದು ಸಂಜೆ 5 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
ಹೇಗೆ ಮಾಹಿತಿ ನೀಡಬೇಕು
ಸಲಹೆ, ಸೂಚನೆಗಳು, ಮನವಿಗಳನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು. ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ,
ನಂ.16, ಡಿ. ದೇವರಾಜ ಅರಸು ಭವನ, ಮಿಲ್ಲರ್ಸ್ ಟ್ಯಾಂಕ್ ಬಂಡ್, ವಸಂತನಗರ, ಬೆಂಗಳೂರು
- ಇ-ಮೇಲ್: kscbcb@gmail.com
- ದೂರವಾಣಿ: 080-29506668
- ಸಮೀಕ್ಷೆ ನಡೆಯುವ ದಿನಗಳು: ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7, 2025ರವರೆಗೆ (15 ದಿನಗಳು)
- ಸಮೀಕ್ಷೆ ವರದಿ: ಅಕ್ಟೋಬರ್ ಕೊನೆಗೊಳಗೆ ಸಲ್ಲಿಕೆ
- ಈ ಬಾರಿ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ನಡೆಯಲಿದೆ.
ಸಿಎಂ ಸಿದ್ದರಾಮಯ್ಯ ಸೂಚನೆ: ಸಮೀಕ್ಷೆ ತಪ್ಪಿಲ್ಲದೆ, ಪಾರದರ್ಶಕವಾಗಿ ನಡೆಯಬೇಕು. ಯಾವುದೇ ವ್ಯಕ್ತಿ ಅಥವಾ ಜಾತಿ ಹೊರಗುಳಿಯಬಾರದು. ಸಮೀಕ್ಷೆಯ ಮುಖ್ಯ ಉದ್ದೇಶ: ಜಾತಿ ತಾರತಮ್ಯ ನಿವಾರಣೆ ಮತ್ತು ಸಮಾನತೆ ಖಾತ್ರಿಪಡಿಸುವುದು.