Raichur: ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ (Sindhanur Taluk Hospital) ನಾಲ್ವರು ಬಾಣಂತಿಯರ ಸಾವಿಗೆ ಕಾರಣವಾಗಿದೆ ಎನ್ನಲಾದ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಪರೀಕ್ಷೆಗೊಳಪಡಿಸಿದ್ದು, ಬಳಕೆಗೆ ಅಯೋಗ್ಯ ಎಂದು ವರದಿ ತಿಳಿಸಿದೆ. ಬೆಂಗಳೂರು ಮತ್ತು ಹೈದರಾಬಾದ್‌ನ ಲ್ಯಾಬೊರೇಟರಿಗಳ ವರದಿಯ ಪ್ರಕಾರ, ದ್ರಾವಣದಲ್ಲಿ ಎಂಡೋ ಟಾಕ್ಸಿನ್ ಅಂಶವು ಕಾಣಿಸಿಕೊಂಡಿದ್ದು, ಇದು ಉಪಯೋಗಕ್ಕೆ ಅನರ್ಹವಾಗಿದೆ ಎಂದು ತಿಳಿದುಬಂದಿದೆ.
- ರಾಯಚೂರು ಜಿಲ್ಲಾಡಳಿತ ಮೂರು ಲ್ಯಾಬೊರೇಟರಿಗಳಿಗೆ IV ಹತ್ತು ದ್ರಾವಣದ 6 ಮಾದರಿಗಳನ್ನು ಕಳುಹಿಸಿತ್ತು.
- ಬೆಂಗಳೂರು ವೈದ್ಯಕೀಯ ಕಾಲೇಜು: 6 ಮಾದರಿಗಳಲ್ಲಿ 4 ಉಪಯೋಗಕ್ಕೆ ಯೋಗ್ಯವಿಲ್ಲ ಎಂದು ವರದಿ ನೀಡಿದೆ.
- ಹೈದರಾಬಾದ್ ವಿಂಪ್ಟಾ ಲ್ಯಾಬ್: 6 ಮಾದರಿಗಳಲ್ಲಿ 2 ಮಾತ್ರ ಯೋಗ್ಯವಿಲ್ಲ ಎಂದು ಹೇಳಿದೆ.
- ಸರ್ಕಾರದ ಡ್ರಗ್ ಕಂಟ್ರೋಲ್ ಲ್ಯಾಬ್‌ನ ವರದಿ ಇನ್ನೂ ಬಾಕಿಯಿದೆ.
ಕಳೆದ ಮೂರು ತಿಂಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ 10 ಬಾಣಂತಿಯರ ಸಾವಿನ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಸಿಂಧನೂರಿನಲ್ಲೇ ನಾಲ್ವರು ಬಾಣಂತಿಯರು ಸಿಸೇರಿಯನ್ ನಂತರ ಸಾವನ್ನಪ್ಪಿದ್ದಾರೆ
ಬಾಣಂತಿಯರ ಸಾವಿಗೆ ಪಶ್ಚಿಮ ಬಂಗಾಳದ ಕಂಪನಿ ತಯಾರಿಸಿದ ದ್ರಾವಣ ಕಾರಣವೆಂದು ಸರ್ಕಾರವು ತಿಳಿಸಿದ್ದು, ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲಿಯೂ ಚರ್ಚೆಯಾಗಿದೆ. ವಿಪಕ್ಷಗಳು ಸರ್ಕಾರವನ್ನು ನೇರವಾಗಿ ಹೊಣೆಗಾರ ಎಂದು ಆರೋಪಿಸುತ್ತಿವೆ.
ರಾಜ್ಯದ ಹಲವೆಡೆಗಳಲ್ಲಿ ಮೃತಪಟ್ಟ ಬಾಣಂತಿಯರ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಎಲ್ಲಾ ಮಾಹಿತಿಗಳನ್ನು ಕಲೆಹಾಕಿ ನಿರ್ದಿಷ್ಟ ವರದಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸಿಂಧನೂರಿನ ಘಟನೆ ರಾಜ್ಯದ ಆರೋಗ್ಯ ವ್ಯವಸ್ಥೆಯ ಎಚ್ಚರಿಕೆಗೆ ನಿದರ್ಶನವಾಗಿದೆ.