Home Karnataka Kodagu ‘ಯೋದ ನಮನಂ’ ರಥಯಾತ್ರೆಗೆ ಪುಷ್ಪನಮನ

‘ಯೋದ ನಮನಂ’ ರಥಯಾತ್ರೆಗೆ ಪುಷ್ಪನಮನ

Somwarpet Kodagu Yodha Namanam Chariot

Somwarpet, Kodagu : ಹೆಲಿಕಾಪ್ಟರ್ ದುರಂತದಲ್ಲಿ (Helicopter Tragedy) ಮಡಿದ ಸೇನಾನಿಗಳಿಗೆ (Soldiers) ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ನಡೆಯುತ್ತಿರುವ ಯೋದ ನಮನಂ ರಥಯಾತ್ರೆ (Yodha Namanam) ಭಾನುವಾರ ಸೋಮವಾರಪೇಟೆ ಪಟ್ಟಣದ ಪುಟ್ಟಪ್ಪ ವೃತ್ತಕ್ಕೆ ಆಗಮಿಸಿತು.

ಬಿಪಿನ್ ರಾವತ್ ರಥಕ್ಕೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಮತ್ತು ಸದಸ್ಯರು ಪುಷ್ಪನಮನ ಸಲ್ಲಿಸಿ ಮಾತನಾಡಿದರು, ‘ಭಾರತೀಯ ಯೋಧರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿ, ಸೇನಾ ವ್ಯವಸ್ಥೆಯನ್ನೇ ಬಲಿಷ್ಠಗೊಳಿಸಿದ ಕೀರ್ತಿ ಬಿಪಿನ್ ರಾವತ್ ಅವರಿಗೆ ಸಲ್ಲುತ್ತದೆ’ ಎಂದು ತಿಳಿಸಿದರು.

ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಪರ್ಕ ಪ್ರಮುಖ್ ಎಂ.ಬಿ. ಉಮೇಶ್, ಸುಭಾಶ್ ತಿಮ್ಮಯ್ಯ, ಸುನಿಲ್, ಬೋಜೇಗೌಡ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version