New Delhi: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಹೆಸರು, ಅವರು ಭಾರತೀಯ ನಾಗರಿಕರಾಗುವ ಮೂರು ವರ್ಷಗಳ ಮುಂಚೆಯೇ (1980ರಲ್ಲಿ) ದೆಹಲಿಯ ಮತದಾರರ ಪಟ್ಟಿಯಲ್ಲಿ ಸೇರಿದೆ ಎಂದು ಆರೋಪಿಸಿ, ದೆಹಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ.
ಅರ್ಜಿದಾರ ವಿಕಾಸ್ ತ್ರಿಪಾಠಿ ಅವರ ಪ್ರಕಾರ, ಸೋನಿಯಾ ಗಾಂಧಿ ಅವರು ಏಪ್ರಿಲ್ 1983ರಲ್ಲಿ ಭಾರತೀಯ ನಾಗರಿಕರಾದರೂ, 1980ರಲ್ಲೇ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ನಂತರ 1982ರಲ್ಲಿ ಅಳಿಸಲಾಗಿದ್ದು, ಮತ್ತೆ 1983ರಲ್ಲಿ ಸೇರಿಸಲಾಗಿದೆ ಎಂದು ಆರೋಪಿಸಿದ್ದಾರೆ.
“ಭಾರತೀಯ ಪೌರತ್ವಕ್ಕಾಗಿ ಅವರ ಅರ್ಜಿ 1983ರದ್ದಾಗಿದ್ದರೂ, 1980ರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಹೇಗೆ ಸೇರಿತು?” ಎಂದು ಅರ್ಜಿದಾರರ ವಕೀಲರು ಪ್ರಶ್ನಿಸಿದ್ದಾರೆ.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಲಾಗಿದೆ. ಸೋನಿಯಾ ಗಾಂಧಿ ಅಥವಾ ದೆಹಲಿ ಪೊಲೀಸರಿಗೆ ಇನ್ನೂ ಯಾವುದೇ ನೋಟಿಸ್ ನೀಡಲಾಗಿಲ್ಲ.