Kolkata, West Bengal : ಈ ವಾರದ ಆರಂಭದಲ್ಲಿ ಕೋಲ್ಕತ್ತಾ ಆಸ್ಪತ್ರೆಗೆ ದಾಖಲಾಗಿದ್ದ BCCI ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅವರನ್ನು ಇಂದು ಡಿಸ್ಚಾರ್ಜ್ ಮಾಡಲಾಗಿದ್ದು, ಅವರು ಮನೆಯಲ್ಲಿ ಪ್ರತ್ಯೇಕವಾಗಿ ಅನ್ಯರ ಸಂಪರ್ಕಕ್ಕೆ ಬರದೇ ಕೆಲ ದಿನಗಳು ವಾಸಿಸುತ್ತಾ ವೈದ್ಯಕೀಯ ಮಂಡಳಿಯ ಮೇಲ್ವಿಚಾರಣೆಯಲ್ಲಿರಲು ತಿಳಿಸಲಾಗಿದೆ ಎಂದು PTI ವರದಿ ಮಾಡಿದೆ.
ಜಗತ್ತಿನಾದ್ಯಂತ ಒಮಿಕ್ರಾನ್ (Covid-19 Omicron) ಕೊರೊನಾವೈರಸ್ ರೂಪಾಂತರಿಯಿಂದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗಂಗೂಲಿ ಅವರು ಒಮಿಕ್ರಾನ್ ರೂಪಾಂತರಿಯಿಂದ ಸೋಂಕಿತರಾಗಿಲ್ಲ ಎಂದು ಆರ್‌ಟಿ-ಪಿಸಿಆರ್ ಪರೀಕ್ಷೆಯಿಂದ ತಿಳಿದುಬಂದಿದೆ.
ಸೋಮವಾರ ವುಡ್‌ಲ್ಯಾಂಡ್ಸ್ ಆಸ್ಪತ್ರೆಗೆ (Woodlands Hospital) ದಾಖಲಾದ 49 ವರ್ಷದ ಗಂಗೂಲಿ ಅವರಿಗೆ ತಕ್ಷಣವೇ ಮೊನೊಕ್ಲೋನಲ್ ಆಂಟಿಬಾಡಿ ಕಾಕ್‌ಟೈಲ್ ಚಿಕಿತ್ಸೆಯನ್ನು ನೀಡಲಾಗಿತ್ತು.
Image: BCCI