ದಕ್ಷಿಣ ಕೊರಿಯಾದಲ್ಲಿ (South Korea) ರಾಜಕೀಯ ಅಸ್ಥಿರತೆ ಹೆಚ್ಚಾಗಿದೆ. ರಕ್ಷಣಾ ಸಚಿವ ಕಿಮ್ ಯೋಂಗ್-ಹ್ಯುನ್, (Defence Minister Kim Yong-hyun) ಸಮರ ಕಾನೂನಿನ ಪ್ರಮುಖ ಪ್ರಣೇತ ಎಂದು ಕರೆಸಿಕೊಳ್ಳುತ್ತಿದ್ದ ಅವರು ರಾಜೀನಾಮೆ ನೀಡಿದ್ದಾರೆ. ಬುಧವಾರ ರಾತ್ರಿ 11 ಗಂಟೆಗೆ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್-ಯೋಲ್ (South Korean President Yoon Suk-yeol) ದೇಶವನ್ನು ಉದ್ದೇಶಿಸಿ ಸಮರ ಕಾನೂನನ್ನು ಜಾರಿಗೆ ತರಲು ನಿರ್ಧಾರ ಮಾಡಿದಾಗ ಈ ಬೆಳವಣಿಗೆ ನಡೆದಿದೆ.
ಆದರೆ ಈ ನಿರ್ಧಾರಕ್ಕೆ ಪ್ರತಿಪಕ್ಷಗಳು ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಅಂತಿಮವಾಗಿ, ಈ ನಿರ್ಧಾರವನ್ನು ಹಿಂಪಡೆಯಲು ಒತ್ತಾಯಿಸಲಾಗಿತ್ತು. ಸಮರ ಕಾನೂನು ವಿರೋಧಿ ನಿರ್ಣಯವನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕರಿಸಲಾಯಿತು. ಇದೇ ಸಂದರ್ಭದಲ್ಲಿ, ಹೊಸ ರಕ್ಷಣಾ ಸಚಿವರಾಗಿ ಸೌದಿ ಅರೇಬಿಯಾದ ರಾಯಭಾರಿ ಚೋಯ್ ಬ್ಯುಂಗ್-ಹ್ಯುಕ್ ಅವರನ್ನು ನೇಮಿಸಲಾಯಿತು.
ದಕ್ಷಿಣ ಕೊರಿಯಾದ ಆಡಳಿತಾರೂಢ ಪೀಪಲ್ಸ್ ಪವರ್ ಪಕ್ಷವು ಸಂಸತ್ತಿನಲ್ಲಿ ಸ್ವಲ್ಪ ಬೆಂಬಲವನ್ನು ಹೊಂದಿದ್ದು, ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷ ಪ್ರಾಬಲ್ಯದಲ್ಲಿದೆ. ಈ ಕಾರಣದಿಂದ, ಪ್ರತಿಯೊಂದು ಮಹತ್ವದ ನಿರ್ಧಾರವನ್ನು ವಿರೋಧ ಪಕ್ಷವು ತಡೆಗಟ್ಟುವ ಪ್ರಯತ್ನ ನಡೆಸುತ್ತಿದೆ.
ಅಧ್ಯಕ್ಷ ಯೂನ್ ಅವರ ಇಮೇಜ್‌ಗೆ ಹಾನಿಯಾದರೂ, ಕಿಮ್ ಅವರನ್ನು ವಿಶ್ವಾಸಾರ್ಹ ನಾಯಕನೆಂದು ಪರಿಗಣಿಸಲಾಗಿದೆ. ಸಂಪುಟದ 12 ಜನ ಸಚಿವರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದು, ಇನ್ನೂ ಹಲವರು ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಸಮರ ಕಾನೂನು ಜಾರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ನಿರ್ಧಾರವು ಜನರ ಸ್ವಾತಂತ್ರ್ಯ ಮತ್ತು ದೇಶದ ಸ್ಥಿರತೆಗೆ ಧಕ್ಕೆ ತರಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. 1980 ನಂತರ ಮೊದಲ ಬಾರಿಗೆ ಮಿಲಿಟರಿ ಆಡಳಿತ ಜಾರಿಗೆ ಬಂದಿದ್ದು, ಆರು ಗಂಟೆಗಳಲ್ಲಿಯೇ ನಿರ್ಧಾರ ಬದಲಾಯಿಸಲಾಗಿದೆ.