Bengaluru: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆ ಯಶಸ್ವಿಯಾದ ಕಾರಣ ಅಧ್ಯಕ್ಷ ಎಸ್.ಸೋಮನಾಥ್ (S Somanath) ಅವರಿಗೆ ಅಂತಾರಾಷ್ಟ್ರೀಯ ಖಗೋಳಶಾಸ್ತ್ರೀಯ ಒಕ್ಕೂಟವು (IAF) ವಿಶ್ವ ಬಾಹ್ಯಾಕಾಶ ಪ್ರಶಸ್ತಿ (World Space Prize) ನೀಡಿ ಗೌರವಿಸಿದೆ ಎಂದು ISRO ಹೇಳಿದೆ.
ಚಂದ್ರಯಾನ-3, ಕಡಿಮೆ ಖರ್ಚಿನ ತಂತ್ರಜ್ಞಾನ ಸದ್ಬಳಕೆ, ಈ ಹಿಂದೆ ಯಾರೂ ಇಳಿಯದ ಚಂದ್ರನ ದಕ್ಷಿಣ ಭಾಗಕ್ಕೆ ಚಂದ್ರಯಾನ ಇಳಿದಿರುವುದು ನಾವೀನ್ಯತೆಗೆ ಜಾಗತಿಕ ಪುರಾವೆಯಾಗಿದೆ.
ಹೀಗಾಗಿ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರಿಗೆ ವಿಶ್ವ ಬಾಹ್ಯಾಕಾಶ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಐಎಎಫ್ ಹೇಳಿದೆ ಎಂದು ಇಸ್ರೋ ತಿಳಿಸಿದೆ.
“ಚಂದ್ರಯಾನ -3ರ ಗಮನಾರ್ಹ ಸಾಧನೆಗಾಗಿ ಡಿಒಎಸ್ ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷ ಡಾ.ಎಸ್ ಸೋಮನಾಥ್ ಅವರು ಪ್ರತಿಷ್ಠಿತ ಐಎಎಫ್ ವಿಶ್ವ ಬಾಹ್ಯಾಕಾಶ ಪ್ರಶಸ್ತಿಯನ್ನ ಸ್ವೀಕರಿಸಿದ್ದಾರೆ ಎಂದು ಘೋಷಿಸಲು ಇಸ್ರೋಗೆ ಗೌರವವಿದೆ” ಎಂದು ಇಸ್ರೋ ಟ್ವೀಟ್ ಮಾಡಿದೆ.
“ಈ ಮಾನ್ಯತೆಯು ಬಾಹ್ಯಾಕಾಶ ಪರಿಶೋಧನೆಗೆ ಭಾರತದ ಕೊಡುಗೆಗಳನ್ನ ಆಚರಿಸುತ್ತದೆ. ನಾವು ಹೊಸ ಗಡಿಗಳಿಗಾಗಿ ಶ್ರಮಿಸುತ್ತಿರುವುದರಿಂದ ಮಿಲನ್ನಲ್ಲಿ ಆಚರಣೆಗಳು ನಡೆಯುತ್ತಿವೆ” ಎಂದು ಇಸ್ರೋ ಹೇಳಿದೆ.