back to top
20.4 C
Bengaluru
Tuesday, October 7, 2025
HomeKarnatakaದೇಗುಲಗಳಲ್ಲಿ ಅವಘಡ ತಡೆಯಲು ವಿಶೇಷ ತಂಡದ ರಚನೆ ಶಿಫಾರಸು

ದೇಗುಲಗಳಲ್ಲಿ ಅವಘಡ ತಡೆಯಲು ವಿಶೇಷ ತಂಡದ ರಚನೆ ಶಿಫಾರಸು

- Advertisement -
- Advertisement -

Bengaluru: ದೇವಾಲಯಗಳಲ್ಲಿ ಕಾಲ್ತುಳಿತ, ಬೆಂಕಿ ಅವಘಡಗಳು ಮತ್ತು ತುರ್ತು ವೈದ್ಯಕೀಯ ಪರಿಸ್ಥಿತಿಗಳನ್ನು ತಡೆಯಲು “ದೇವಾಲಯ ಕಾರ್ಯಪಡೆ” (Temple Task Force) ಎಂಬ ಹೊಸ ತಂಡವನ್ನು ರಚಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ನೇತೃತ್ವದ ‘ಕರ್ನಾಟಕ ಆಡಳಿತ ಸುಧಾರಣಾ ಆಯೋಗ – 2’ ಈ ಶಿಫಾರಸ್ಸು ಸಲ್ಲಿಸಿದೆ. ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ಎಂಟನೇ ಶಿಫಾರಸು ವರದಿಯನ್ನು ಗುರುವಾರ ನೀಡಿದೆ.

ಈ ಕಾರ್ಯಪಡೆ ಭಕ್ತರ ನಿಯಂತ್ರಿತ ಪ್ರವೇಶ, ಸರದಿ ಸಾಲುಗಳ ನಿರ್ವಹಣೆ, ಟಿಕೆಟ್ ಕೌಂಟರ್ ಮತ್ತು ಪ್ರಸಾದ ವಿತರಣೆಯಲ್ಲೂ ಸಹಾಯ ಮಾಡಲಿದೆ. ಇದರಿಂದ ಭದ್ರತೆ ಹೆಚ್ಚಾಗಿ ಅವಘಡಗಳನ್ನು ತಡೆಗಟ್ಟಬಹುದು.

ಕಾರ್ಯಪಡೆಯ ಮುಖ್ಯ ಕಾರ್ಯಗಳು

  • ದೇವಾಲಯದ ಪ್ರವೇಶ ಮತ್ತು ನಿರ್ಗಮನ ನಿಯಂತ್ರಣ.
  • ಬ್ಯಾರಿಕೇಡ್‌ಗಳು ಮತ್ತು ದಾರಿಯ ಸೂಚನೆಗಳಿಂದ ದಟ್ಟಣೆಯ ನಿಯಂತ್ರಣ.
  • ಅಗ್ನಿಶಾಮಕ ಸಿಬ್ಬಂದಿ, ವೈದ್ಯಕೀಯ ಸೇವೆಗಳೊಂದಿಗೆ ಒಟ್ಟಾಗಿ ತುರ್ತು ಯೋಜನೆ ರೂಪಿಸು.
  • ಮಹಾ ಕಾರ್ಯಕ್ರಮಗಳ ಸಂದರ್ಭದಲ್ಲಿ ತಾತ್ಕಾಲಿಕ ವೈದ್ಯಕೀಯ ಬೂತ್‌ಗಳು ಸ್ಥಾಪನೆ ಮತ್ತು ಭದ್ರತಾ ವ್ಯವಸ್ಥೆ ಬಲಪಡಿಸುವುದು.

ಸಂಪರ್ಕ ಮತ್ತು ಮಾಹಿತಿ ವ್ಯವಸ್ಥೆ

  • ಭಕ್ತರಿಗೆ ಸರದಿ, ಪ್ರವೇಶ ಮಾರ್ಗ, ಸಮಯ ಬದಲಾವಣೆ ಮುಂತಾದ ಮಾಹಿತಿ ನೀಡಲು ಧ್ವನಿವರ್ಧಕಗಳು ಮತ್ತು ಸೂಚನಾ ಫಲಕಗಳ ಬಳಕೆ.
  • ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ನಿಯಮಗಳಲ್ಲಿ ಈ ಕಾರ್ಯಪಡೆಗೆ ಅನುಕೂಲವಾಗುವಂತೆ ಬದಲಾವಣೆ ಶಿಫಾರಸು.

ಈ ಶಿಫಾರಸ್ಸು ದೇವಾಲಯಗಳಲ್ಲಿ ಭದ್ರತೆ ಮತ್ತು ಸೇವೆಯ ದಕ್ಷತೆಯನ್ನು ಹೆಚ್ಚಿಸಲು ಉದ್ದೇಶಿತವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page