Search
WhatsApp alerts

Home › News

Sports Bill ಲೋಕಸಭೆಯಲ್ಲಿ ಪಾಸ್‌–BCCIಗೂ ಸರ್ಕಾರದ ನಿಯಂತ್ರಣ

administrator · Published

Lok Sabha passes sports bill-Sports Minister Mansukh Mandaviya

New Delhi: ದೇಶದ ಕ್ರೀಡಾ ಆಡಳಿತದಲ್ಲಿ ಪಾರದರ್ಶಕತೆ ತರಲು ಉದ್ದೇಶಿಸಿದ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ (Sports Bill) ಲೋಕಸಭೆಯಲ್ಲಿ (Lok Sabha) ಅಂಗೀಕಾರಗೊಂಡಿದೆ. ಶೀಘ್ರದಲ್ಲೇ ರಾಜ್ಯಸಭೆಯಲ್ಲೂ ಪಾಸ್ ಆಗಿ ಕಾಯ್ದೆಯಾಗುವ ನಿರೀಕ್ಷೆಯಿದೆ.

ಈ ಮಸೂದೆ ಜಾರಿಗೆ ಬಂದರೆ, ಖಾಸಗಿ ಸಂಸ್ಥೆಯಾಗಿರುವ ಬಿಸಿಸಿಐ ಕೂಡ ಸರ್ಕಾರದ ನಿಯಂತ್ರಣಕ್ಕೆ ಒಳಪಡಲಿದೆ. ಇತರೆ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ಅನ್ವಯಿಸುವ ನಿಯಮಗಳು ಬಿಸಿಸಿಐಗೂ ಅನ್ವಯವಾಗುತ್ತವೆ.

ಮಸೂದೆಯ ಮುಖ್ಯ ಅಂಶಗಳು

  • ರಾಷ್ಟ್ರೀಯ ಕ್ರೀಡಾ ಮಂಡಳಿ (NNB) ರಚನೆ
  • ರಾಷ್ಟ್ರೀಯ ಕ್ರೀಡಾ ನ್ಯಾಯಾಧಿಕರಣ (NST) ಸ್ಥಾಪನೆ
  • ರಾಷ್ಟ್ರೀಯ ಕ್ರೀಡಾ ಚುನಾವಣಾ ಪ್ಯಾನೆಲ್ ನಿರ್ಮಾಣ
  • ಕ್ರೀಡಾಪಟುಗಳ ಆಯ್ಕೆ, ಚುನಾವಣೆ ವಿವಾದ, ಆಡಳಿತ ಹಾಗೂ ಹಣಕಾಸು ದುರುಪಯೋಗದ ಪ್ರಕರಣಗಳಿಗೆ ವಿಶೇಷ ನ್ಯಾಯಾಧಿಕರಣ
  • ತೀರ್ಪುಗಳನ್ನು ಕೇವಲ ಸುಪ್ರೀಂ ಕೋರ್ಟ್‌ನಲ್ಲಿ ಮಾತ್ರ ಪ್ರಶ್ನಿಸಲು ಅವಕಾಶ

ಬಿಸಿಸಿಐ ಮೇಲೆ ಪರಿಣಾಮ: ಬಿಸಿಸಿಐ ತನ್ನ ವಾರ್ಷಿಕ ಮಾನ್ಯತೆಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕು. ಯಾವುದೇ ವಿವಾದದಲ್ಲಿ ನೇರವಾಗಿ ನ್ಯಾಯಾಲಯಕ್ಕೆ ಹೋಗುವ ಮೊದಲು ರಾಷ್ಟ್ರೀಯ ಕ್ರೀಡಾ ನ್ಯಾಯಾಧಿಕರಣವನ್ನು ಸಂಪರ್ಕಿಸುವುದು ಕಡ್ಡಾಯವಾಗಲಿದೆ.

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page