back to top
25.2 C
Bengaluru
Saturday, July 19, 2025
HomeIndiaOperation Sindoor ಸಮಯದಲ್ಲಿ ಗೂಢಚರನ ಬಂಧನ

Operation Sindoor ಸಮಯದಲ್ಲಿ ಗೂಢಚರನ ಬಂಧನ

- Advertisement -
- Advertisement -

ಪಂಜಾಬ್ ಪೊಲೀಸ್‌ ಅಧಿಕಾರಿಗಳು ಆಪರೇಷನ್ ಸಿಂಧೂರ್ (Operation Sindoor) ನಡೆಯುತ್ತಿದ್ದಾಗ ISI ಜೊತೆ ಸೇನಾ ಚಲನವಲನ ಹಂಚಿಕೊಂಡಿದ್ದ ಗೂಢಚರ ಗಗನ್‌ದೀಪ್ ಸಿಂಗ್ ನನ್ನು ಬಂಧಿಸಿದ್ದಾರೆ. ಗಗನ್‌ದೀಪ್ ಸಿಂಗ್ ಪಾಕಿಸ್ತಾನಿ ಖಲಿಸ್ತಾನಿ ಭಯೋತ್ಪಾದಕ ಗೋಪಾಲ್ ಸಿಂಗ್ ಚಾವ್ಲಾ ಜೊತೆ ಸಂಪರ್ಕದಲ್ಲಿದ್ದನೆಂದು ಹೇಳಲಾಗಿದೆ.

ಅವನು ಸೇನೆಯ ಕಾರ್ಯತಂತ್ರಗಳ ಹಾಗೂ ಸೇನಾ ನಿಯೋಜನೆಗಳ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಿ ಏಜೆಂಟ್ಸ್ ಜೊತೆ ಹಂಚಿಕೊಂಡಿದ್ದಾನೆ. ಇದರಿಂದ ದೇಶದ ಭದ್ರತೆಗೆ ಗಂಭೀರ ಬೆದರಿಕೆ ಉಂಟಾಗಿದೆ.

ಪೋಲೀಸರ ಪ್ರಕಾರ, ಗಗನ್‌ದೀಪ್ ಸಿಂಗ್‌ ತನ್ನ ಮೊಬೈಲ್ ಫೋನಿನಲ್ಲಿ 20 ಕ್ಕೂ ಹೆಚ್ಚು ಐಎಸ್ಐ ಸಂಪರ್ಕಗಳನ್ನು ಹೊಂದಿದ್ದಾನೆ. ಈ ಬಗೆಗಿನ ತನಿಖೆ ಮುಂದುವರೆದಿದ್ದು, ಇನ್ನಷ್ಟು ಗೂಢಚರರನ್ನು ಪತ್ತೆಹಚ್ಚಲು ಕ್ರಮಗಳು ಕೈಗೊಂಡಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಉತ್ತರವಾಗಿ ನಡೆದ ಆಪರೇಷನ್ ಸಿಂಧೂರ್ ಸಮಯದಲ್ಲಿ, ಪಾಕಿಸ್ತಾನ ಮೂಲದ ಭಯೋತ್ಪಾದಕರು ಭಾರತದಲ್ಲಿ ಹಲವಾರು ಬೇಹುಗಾರಿಕೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.

ಇತ್ತೀಚೆಗೆ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಿಂದ ಹಲವು ಗೂಢಚಾರರನ್ನು ಬಂಧಿಸಲಾಗಿದ್ದು, ಇದರಿಂದ ಪಾಕಿಸ್ತಾನ ಸಂಪರ್ಕಿತ ಗೂಢಚಾರರ ಜಾಲದ ಅಸ್ತಿತ್ವ ಖಚಿತವಾಗಿದೆ. ಬಂಧಿತರಲ್ಲಿ ಇಬ್ಬರು ಮಹಿಳೆಯರು ಮತ್ತು CRPF ಸಿಬ್ಬಂದಿ ಸಹ ಇದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page