Badami, Bagalkote : ಬನಶಂಕರಿದೇವಿಗೆ (Banashankari Devi) ಶನಿವಾರ ಹಂಪಿ ಹೇಮಕೂಟ ಗಾಯತ್ರಿ ಪೀಠದ (Sri Gayathri Peeta Hemakoota) ದಯಾನಂದ ಪುರಿ ಸ್ವಾಮೀಜಿ (Dhayananthapuri Swamiji) ಬಾಗಿನ ಮತ್ತು ರೇಷ್ಮೆ ಪೀತಾಂಬರ ಅರ್ಪಿಸಿದರು. ಪ್ರತಿ ವರ್ಷ ಬನಂಕರಿದೇವಿ ಜಾತ್ರೆಗೆ ದೇವಾಂಗ ಸಮಾಜದಿಂದ ಪಾದಯಾತ್ರೆಯ ಮೂಲಕ ತೆರಳಿ ದೇವಿಗೆ ರೇಷ್ಮೆ ಪೀತಾಂಬರ ಮತ್ತು ಬಾಗಿನ ಅರ್ಪಿಸುತ್ತಿದ್ದು, Covid-19 ಹಿನ್ನೆಲೆಯಲ್ಲಿ ಈ ಬಾರಿ ಪಾದಯಾತ್ರೆ ರದ್ದು ಮಾಡಿ ದೇವಾಲಯದಲ್ಲಿ ಅರ್ಪಿಸಲಾಯಿತು ಎಂದು ಹಂಪಿ ಗಾಯತ್ರಿ ಪೀಠದ ಜಗದ್ಗುರು ದಯಾನಂದ ಪುರಿ ಸ್ವಾಮೀಜಿ ಹೇಳಿದರು.
ರವೀಂದ್ರ ಕಲಬುರ್ಗಿ, ಪರಗಿ ನಾಗರಾಜ, ಸಂಕಣ್ಣ ಕರಡಿಗುಡ್ಡ, ಸಾವಿತ್ರಮ್ಮ, ದೇವಾಂಗ ಸಮಾಜದ ಹಿರಿಯರು ಉಪಸ್ಥಿತರಿದ್ದರು.