Elon Musk ಪ್ರಾಯೋಜಿತ Starlink ನ India ದೇಶದ ನಿರ್ದೇಶಕ ಸಂಜಯ್ ಭಾರ್ಗವ (Sanjay Bhargava) ಅವರು ರಾಜೀನಾಮೆ (Resignation) ನೀಡಿತ್ತಿರುವುದಾಗಿ ತಮ್ಮ LinkedIn ಖಾತೆಯಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳನ್ನು (Satellite Based Internet Service) ನೀಡಲು ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆಗಳಿಗೆ ಪರವಾನಗಿ (Licence) ಹೊಂದಿಲ್ಲ ಎಂದು ಸರ್ಕಾರ ಹೇಳಿದ ಕೆಲವೇ ವಾರಗಳ ನಂತರ ಈ ಕ್ರಮವು ವ್ಯಕ್ತವಾಗಿದೆ.
ನಿರ್ದೇಶಕನ ರಾಜೀನಾಮೆಯ ಜೊತೆ ಜೊತೆಗೆ ಭಾರತದಲ್ಲಿ ಬಳಕೆದಾರರಾಗಲು ಜನರಿಂದ ಪಡೆದಿದ್ದ ಮುಂಗಡ ಹಣ ಮರುಪಾವತಿಯನ್ನು ನೀಡುವ ಮಾಹಿತಿ ಕುರಿತಾದ e-Mail ಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಭಾರತದಲ್ಲಿ ಕಂಪನಿಯ ಇಂಟರ್ನೆಟ್ ಸೇವೆಗೆ ಪರವಾನಗಿ ನೀಡುವವರೆಗೆ ಜನರಿಂದ ಪಡೆದಿದ್ದ ಮುಂಗಡ ಹಣವನ್ನು ಮರುಪಾವತಿಸಲು ಟೆಲಿಕಾಂ ಇಲಾಖೆಯಿಂದ ನಿರ್ದೇಶಿಸಲಾಗಿದೆ ಎಂದು ಸ್ಟಾರ್‌ಲಿಂಕ್ ಹೇಳಿದೆ.