ಸಾಮಾಜಿಕ ಜಾಲತಾಣ Twitter ಅನ್ನು ಖರೀದಿಸಿದ ತಕ್ಷಣವೇ ಈಲೋನ್ ಮಸ್ಕ್ (Elon Musk) ಟ್ವಿಟರ್ CEO ಪರಾಗ್ ಅಗರವಾಲ್, CFO ನೆಡ್ ಸೆಗಲ್ ಮತ್ತು ಕಾನೂನು ವ್ಯವಹಾರಗಳ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ವಜಾಗೊಳಿಸಿದ್ದರೆ (Layoff). ನಂತರ, Twitter ನವೆಂಬರ್ 4 ರಂದು ತನ್ನ ಬಹುತೇಕ ಅರ್ಧದಷ್ಟು ಸಿಬ್ಬಂದಿಯನ್ನು (7,500) ಕೆಲಸದಿಂದ ವಜಾಗೊಳಿಸಿದೆ. ಉದ್ಯೋಗಿಗಳಿಗೆ ಒಂದು ದಿನ ಮುಂಚಿತವಾಗಿ ಕಳುಹಿಸಿದ ಇಮೇಲ್ ಸಂದೇಶದಲ್ಲಿ ಅವರನ್ನು ವಜಾಗೊಳಿಸುವ ವಿಷಯವನ್ನು ತಿಳಿಸಲಾಗಿದೆ.
ಭಾರತದಲ್ಲಿ, ಮುಂಜಾನೆ 4 ಗಂಟೆಗೆ ಇಮೇಲ್ ಸಂದೇಶ ತಲುಪಿದ್ದು, India ದ Twitter ನಲ್ಲಿನ ಮಾರ್ಕೆಟಿಂಗ್, ಕಮ್ಯುನಿಕೇಷನ್ ಮತ್ತು ಎಂಜಿನಿಯರಿಂಗ್ ತಂಡಗಳ ಬಹುತೇಕ ಎಲ್ಲಾ ಜನರನ್ನು ವಜಾಗೊಳಿಲಾಗಿದೆ ಎಂದು Indian Express ವರದಿ ಮಾಡಿದೆ. ಟ್ವಿಟರ್ ಭಾರತದಲ್ಲಿ 250 ರಿಂದ 300 ಉದ್ಯೋಗಿಗ ತಂಡವನ್ನು ಹೊಂದಿತ್ತು.