Kalaburagi: ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜು ಸ್ಟೈಪಂಡ್ ಹಗರಣ (Stipend) ಸಂಬಂಧ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಮಾಜಿ ಅಧ್ಯಕ್ಷ ಭೀಮಾಶಂಕರ್ ಬಿಲ್ಗುಂದಿ ಅವರ ಮನೆ ಸೇರಿದಂತೆ ಏಳು ಕಡೆಗಳಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಇ.ಡಿ ಅಧಿಕಾರಿಗಳು, ಎಂಆರ್‌ಎಂಸಿ ವೈದ್ಯಕೀಯ ಕಾಲೇಜುಗಳ ಮಾಜಿ ಡೀನ್ ಡಾ. ಎಸ್.ಎಂ. ಪಟೇಲ್ ಮತ್ತು ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜು ಲೆಕ್ಕಪರಿಶೋಧಕ ಸುಭಾಷ್ ಚಂದ್ರ ಅವರ ಸಂಬಂಧಿತ ಸ್ಥಳಗಳನ್ನು ಸೇರಿಸಿ ಕಲಬುರಗಿಯ ಜಿಲ್ಲೆಯಲ್ಲಿ ಶೋಧ ನಡೆಸಿದ್ದಾರೆ.
ಪಿಎಂಎಲ್ಎ 2002ರ ನಿಬಂಧನೆಗಳ ಅಡಿಯಲ್ಲಿ ಏಪ್ರಿಲ್ 30, ಮೇ 1 ಹಾಗೂ 3ರಂದು ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಎಲೆಕ್ಟ್ರಾನಿಕ್ ದಾಖಲೆಗಳಲ್ಲಿ ಹಲವು ದೋಷಾರೋಪಣೆಯ ಪುರಾವೆಗಳು ದೊರಕಿವೆ ಎಂದು ಇ.ಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.