back to top
25.2 C
Bengaluru
Friday, July 18, 2025
HomeKarnatakaKRS Dam ಬಳಿ ಕಾಮಗಾರಿಗೆ ತಡೆ? High Court ನೋಟಿಸ್ ಜಾರಿ

KRS Dam ಬಳಿ ಕಾಮಗಾರಿಗೆ ತಡೆ? High Court ನೋಟಿಸ್ ಜಾರಿ

- Advertisement -
- Advertisement -

Bengaluru: ಮಂಡ್ಯ ಜಿಲ್ಲೆಯ KRS dam ಬಳಿ ಡಿಸ್ನಿಲ್ಯಾಂಡ್ ಶೈಲಿಯ ಮನರಂಜನಾ ಪಾರ್ಕ್ ಮತ್ತು “ಕಾವೇರಿ ಆರತಿ” ಯೋಜನೆಗಳನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (PIL) ಕರ್ನಾಟಕ ಹೈಕೋರ್ಟ್ ನಲ್ಲಿ (High Court) ಸಲ್ಲಿಸಲಾಗಿದೆ.

ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ (ನ್ಯಾಯಮೂರ್ತಿಗಳು ವಿ. ಕಾಮೇಶ್ವರ ರಾವ್ ಮತ್ತು ಸಿಎಂ ಜೋಷಿ) ರಾಜ್ಯ ಸರ್ಕಾರ ಹಾಗೂ ಕಾವೇರಿ ನೀರಾವರಿ ನಿಗಮಕ್ಕೆ ನೋಟಿಸ್ ನೀಡಿ, ವಿವರ ನೀಡುವಂತೆ ಸೂಚಿಸಿದೆ. ಅರ್ಜಿದಾರರ ಪರವಾಗಿ ವಕೀಲ ಎಂ. ಶಿವಪ್ರಕಾಶ್ ಹಾಜರಿದ್ದರು.

ಅರ್ಜಿದಾರರು, ಡ್ಯಾಂ ಬಳಿ 120 ಅಡಿ ಎತ್ತರವಿರುವ ಕಾವೇರಿ ದೇವಿಯ ವಿಗ್ರಹ ನಿರ್ಮಾಣ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಕಾಮಗಾರಿಗೆ ಉಪಯೋಗಿಸಿರುವ ಯಂತ್ರಗಳ ಫೋಟೋಗಳನ್ನು ಕೂಡ ಸಲ್ಲಿಸಲಾಗಿದೆ.

ಸರ್ಕಾರ ಹೈಕೋರ್ಟ್‌ಗೆ ನೀಡಿರುವ ಮಾಹಿತಿ ಪ್ರಕಾರ, ಈವರೆಗೆ ಕೇವಲ ಕಾವೇರಿ ವಿಗ್ರಹ ಸ್ಥಾಪನೆಗಾಗಿ ಟೆಂಡರ್ ನೀಡಲಾಗಿದೆ. ಪಾರ್ಕ್ ಕಾಮಗಾರಿ ಇನ್ನೂ ಟೆಂಡರ್ ಹಂತದಲ್ಲಿಲ್ಲ. ವಿಗ್ರಹ ನಿರ್ಮಾಣಕ್ಕೆ ತಾಂತ್ರಿಕ ತಜ್ಞರಿಂದ ಅನುಮತಿ ಪಡೆಯಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಹೈಕೋರ್ಟ್ ಏನು ಕೇಳಿದೆ?

  • ಡ್ಯಾಂ ಬಳಿ ನಡೆಯುವ ಈ ಕಾಮಗಾರಿಯಿಂದ ಅಣೆಕಟ್ಟೆಗೆ ಯಾವುದೇ ಹಾನಿ ಆಗುವ ಸಾಧ್ಯತೆಯಿದೆಯೇ?
  • ಈ ಬಗ್ಗೆ ಜಲಾಶಯ ಸುರಕ್ಷತಾ ಸಮಿತಿಯಿಂದ ಅನುಮತಿ ಪಡೆದಿರುವಿರಾ?
  • ತಜ್ಞರಿಂದ ಸಲಹೆ ಪಡೆದು ತೊಡಗಿದಿರಾ?

ಹೀಗೆ ಹಲವಾರು ಪ್ರಶ್ನೆಗಳನ್ನು ನ್ಯಾಯಾಲಯವು ಸರ್ಕಾರ ಮತ್ತು ನಿಗಮಕ್ಕೆ ಮುಂದಿಟ್ಟಿದೆ. ಉತ್ತರಿಸಲು 2 ವಾರಗಳ ಕಾಲಾವಕಾಶ ನೀಡಲಾಗಿದೆ.

ಈ ಯೋಜನೆಗಳಿಗೆ ಈಗಾಗಲೇ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಬಿಜೆಪಿಯು ಮತ್ತು ಜೆಡಿಎಸ್ ಕೂಡ ಸರ್ಕಾರದ ವಿರುದ್ಧ ಮಾತು ಹೇಳಿದ್ದಾರೆ. ಆದರೆ ಇತ್ತೀಚೆಗೆ, ಮಂಡ್ಯ ಜಿಲ್ಲೆಯ ಕೆಲವು ಹಿಂದೂ ಸಂಘಟನೆಗಳು ಡಿಕೆ ಶಿವಕುಮಾರ್ ಅವರ “ಕಾವೇರಿ ಆರತಿ” ಯೋಜನೆಗೆ ಬೆಂಬಲ ನೀಡಿವೆ.

ರೈತರ ವಿರೋಧದ ನಡುವೆಯೂ ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ರೈತ ಮುಖಂಡರೊಂದಿಗೆ ಸಭೆ ನಡೆಸಿದರು. ಯೋಜನೆಯ ಪ್ಲಾನ್‌ ಅನ್ನು ರೈತರಿಗೆ ತೋರಿಸಿ ವಿವರಗಳನ್ನು ನೀಡಲು ಪ್ರಯತ್ನಿಸಿದರು.

ಈ ಹೊಸ ಹಂತದಲ್ಲಿ ಹೈಕೋರ್ಟ್‍ನ ನೋಟಿಸ್ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದೀಗ ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮ ನೀಡುವ ಪ್ರತಿಕ್ರಿಯೆಯ ಮೇಲೆ ಯೋಜನೆಯ ಭವಿಷ್ಯ ಅವಲಂಬಿತವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page