Lucknow: ಹೋಟೆಲ್‌ಗಳಲ್ಲಿ ಹಾಗೂ ರಸ್ತೆ ಬದಿಯ ಫುಡ್ ಸ್ಟಾಲ್‌ಗಳಲ್ಲಿ ಆಹಾರ ಕಲಬೆರಕೆ ವಿರುದ್ಧ ಮತ್ತಷ್ಟು ಕಠಿಣ ಕೈಗೊಳ್ಳಲು ಯೋಗಿ ಆದಿತ್ಯನಾಥ (Yogi Adityanath) ನೇತೃತ್ವದ ಉತ್ತರ ಪ್ರದೇಶ ಸರ್ಕಾರ (Uttar Pradesh government) ನಿರ್ಧರಿಸಿದ್ದು, 2 ಸುಗ್ರೀವಾಜ್ಞೆ ಜಾರಿಗೆ ಸಿದ್ಧತೆ ನಡೆಸಿದೆ.
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಫುಡ್ ಸ್ಟಾಲ್‌ಗಳಲ್ಲಿ ಅಡುಗೆ ಮಾಡುವವರು ಆಹಾರ ಪದಾರ್ಥಗಳ ಮೇಲೆ ಧಾರ್ಮಿಕ ಕಾರಣ ನೀಡಿ ಉಗಿದ ಹಾಗೂ ಜ್ಯೂಸ್‌ಗಳಲ್ಲಿ ಮೂತ್ರ ಮಾಡಿದ ವಿಡಿಯೋ ವೈರಲ್ ಆಗಿದ್ದವು. ಅಲ್ಲದೇ ಖರ್ಜೂರವನ್ನು ನೆಕ್ಕುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡಿತ್ತು.
ಹೀಗಾಗಿ ಹೋಟೆಲ್‌ಗಳಲ್ಲಿ ಸ್ವಚ್ಛತೆಗೆ ಇತ್ತೀಚೆಗೆ ಸರ್ಕಾರ ಕೆಲವು ಕ್ರಮ ಕೈಗೊಂಡಿತ್ತು. ಆದರೆ, ನಿಯಮ ಮತ್ತಷ್ಟು ಕಠಿಣಗೊಳಿಸಲು ‘ಉಗಿತ ನಿಷೇಧ ಸುಗ್ರೀವಾಜ್ಞೆ-2024’ ಹಾಗೂ ‘ಆಹಾರ ಕಲಬೆರಕೆ ತಡೆ ಸುಗ್ರೀವಾಜ್ಞೆ-2024’ ಜಾರಿಗೆ ಯೋಗಿ ಮುಂದಾಗಿದ್ದಾರೆ.
ಇವುಗಳು ಜಾರಿ ಆದರೆ ಶುಚಿತ್ವ ಕಾಪಾಡದ ಹೋಟೆಲ್‌ಗಳ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳಲಾಗಿತ್ತದೆ. ಜತೆಗೆ ಆಹಾರ ತಯಾರಿಕೆ ವಿಧಾನ ಹಾಗೂ ಶುಚಿತ್ವದ ಮಾಹಿತಿ ಕೇಳುವ ಹಕ್ಕು ಗ್ರಾಹಕರಿಗೆ ಲಭಿಸಲಿದೆ.