ಇಂದು ತೈವಾನ್ ನಲ್ಲಿ (Taiwan) 6 ರಿಕ್ಟರ್ ಮಾಪಕದ ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದೆ. 15 ಜನರಿಗೆ ಗಾಯಗಳಾಗಿದ್ದು, ಕೇಂದ್ರಬಿಂದು ಯುಜಿಂಗ್‌ನಿಂದ 12 ಕಿಲೋಮೀಟರ್ ಉತ್ತರದಲ್ಲಿ ಮತ್ತು 10 ಕಿಲೋಮೀಟರ್ ಆಳದಲ್ಲಿತ್ತು. ಯಾವುದೇ ಸಾವುಗಳ ವರದಿಯಾಗಿಲ್ಲ,
ಆದರೆ ರಕ್ಷಣಾ ತಂಡಗಳು ಹೆಚ್ಚಿನ ಜಾಗರೂಕತೆಯಲ್ಲಿದ್ದು, ಹಾನಿಯ ಪ್ರಮಾಣವನ್ನು ಪರಿಶೀಲಿಸುತ್ತಿವೆ. ಭೂಕಂಪದ ಪರಿಣಾಮವಾಗಿ ಕಟ್ಟಡಗಳು ಅಲುಗಾಡಿದವು, ಮತ್ತು ನಿವಾಸಿಗಳು ಗಾಬರಿಗೊಳ್ಳುವಂತಾಯಿತು.
ಕೆಲವರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಸೂಚನೆ ನೀಡಲಾಗಿತು. ಕಳೆದ ಏಪ್ರಿಲ್ ನಲ್ಲಿ, 7.4 ತೀವ್ರತೆಯ ಭೂಕಂಪವು ದ್ವೀಪದ ಪರ್ವತ ಪೂರ್ವ ಕರಾವಳಿಯ ಹುವಾಲಿಯನ್ ಪ್ರದೇಶದಲ್ಲಿ ಸಂಭವಿಸಿತ್ತು.