ರಾಜ್ ಬಿ. ಶೆಟ್ಟಿ ಅಭಿನಯದ ‘ಸು ಫ್ರಮ್ ಸೋ’ (Su From So) ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಸಿನಿಮಾ ಕೇವಲ ಥಿಯೇಟರ್ ಗಳಲ್ಲಿ ಮಾತ್ರವಲ್ಲ, ಆನ್ಲೈನ್ ಬುಕಿಂಗ್‌ಗಳಲ್ಲಿಯೂ ಹೆಚ್ಚಿನ ಕಲೆಕ್ಷನ್ ಮಾಡುತ್ತಿದೆ. ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರಕ್ಕಿಂತಲೂ ಹೆಚ್ಚು ಟಿಕೆಟ್‌ಗಳು ಬುಕ್ ಆಗಿದ್ದು, ಹೊಸ ದಾಖಲೆಯನ್ನೇ ನಿರ್ಮಿಸಿದೆ. ಇದು ಚಿತ್ರತಂಡ ಹಾಗೂ ನಟ ರಾಜ್ ಬಿ. ಶೆಟ್ಟಿಗೆ ಸಂತೋಷ ತಂದಿದೆ.
ಈ ಚಿತ್ರವನ್ನು ಜೆಪಿ ತುಮ್ಮಿನಾಡ ನಿರ್ದೇಶಿಸಿದ್ದಾರೆ. ಅವರ ಪ್ರತಿಭೆಯ ಮೇಲೆ ನಂಬಿಕೆ ಇಟ್ಟುಕೊಂಡ ರಾಜ್ ಬಿ. ಶೆಟ್ಟಿ ಬಂಡವಾಳ ಹೂಡಿದ್ದಾರೆ. ರಿಲೀಸ್ ಆದ ಮೊದಲ ದಿನವೇ ಈ ಚಿತ್ರ ಕೋಟಿ ರೂ.ಗಳಷ್ಟು ಕಲೆಕ್ಷನ್ ಮಾಡಿದೆ.
ಬುಕಿಂಗ್ ದಾಖಲೆಯ ವಿವರ
ಹಿತೇಶ್ ಎಂಬವರು ಬುಕಿಂಗ್ ಸಂಖೆ್ಯೆಗಳ ಬಗ್ಗೆ ಒಂದು ಪೋಸ್ಟ್ ಹಾಕಿದ್ದು, ಅದರಲ್ಲಿ ‘ಬುಕ್ ಮೈ ಶೋ’ ನ ಮಾಹಿತಿ ಕೂಡ ಇದೆ.
ಪವನ್ ಕಲ್ಯಾಣ್‍ರ ‘ಹರಿ ಹರ ವೀರ ಮಲ್ಲು’ ಚಿತ್ರಕ್ಕೆ 1 ಗಂಟೆಯಲ್ಲಿ 6,130 ಟಿಕೆಟ್‌ಗಳು ಬುಕ್ ಆಗಿವೆ.
ಆದರೆ ‘ಸು ಫ್ರಮ್ ಸೋ’ ಚಿತ್ರಕ್ಕೆ 6,230 ಟಿಕೆಟ್‌ಗಳು ಬುಕ್ ಆಗಿವೆ.
ಹೀಗಾಗಿ ಇದು ಪವನ್ ಕಲ್ಯಾಣ್ ಚಿತ್ರಕ್ಕಿಂತಲೂ ಮುಂದೆ ಹೋಗಿದೆ.
ಇಂದಿನ ಬೆಳಗ್ಗೆ 8.30ರ ತನಕ 2,500 ಜನರಷ್ಟು ಟಿಕೆಟ್ ಬುಕ್ ಮಾಡಿದ್ದು, 9.7 ರೇಟಿಂಗ್ ಬಂದಿದೆ. ಹೆಚ್ಚು ಜನರು 10ಕ್ಕೆ 10 ಸ್ಟಾರ್ ನೀಡಿದ್ದಾರೆ. ದಿನದಿಂದ ದಿನಕ್ಕೆ ಈ ಚಿತ್ರದ ಮೋಡಿ ಹೆಚ್ಚಾಗುತ್ತಿದೆ. ಶೋಗಳ ಸಂಖ್ಯೆ ಹೆಚ್ಚಾದಂತೆ, ಇನ್ನೂ ಹೆಚ್ಚು ಕಲೆಕ್ಷನ್ ಆಗುವ ನಿರೀಕ್ಷೆಯಿದೆ.