back to top
20.5 C
Bengaluru
Thursday, August 14, 2025
HomeNewsBalochistan ದಲ್ಲಿ ಶಾಲಾ ಬಸ್ಸಿಗೆ ಆತ್ಮಾಹುತಿ ಕಾರ್ ಬಾಂಬ್ ದಾಳಿ: 4 ಮಕ್ಕಳು ಸಾವು, 38...

Balochistan ದಲ್ಲಿ ಶಾಲಾ ಬಸ್ಸಿಗೆ ಆತ್ಮಾಹುತಿ ಕಾರ್ ಬಾಂಬ್ ದಾಳಿ: 4 ಮಕ್ಕಳು ಸಾವು, 38 ಮಕ್ಕಳಿಗೆ ಗಾಯ

- Advertisement -
- Advertisement -

ಪಾಕಿಸ್ತಾನದ ಬಲೂಚಿಸ್ತಾನ (Balochistan) ಪ್ರದೇಶದಲ್ಲಿ ಶಾಲೆಗೆ ಹೋಗುತ್ತಿದ್ದ ಬಸ್ಸಿಗೆ ಬುಧವಾರ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟ (Suicide car bomb attack) ಸಂಭವಿಸಿದೆ. ಈ ದಾಳಿಯಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿದ್ದು, 38 ಮಕ್ಕಳು ಗಾಯಗೊಂಡಿದ್ದಾರೆ. ಖುಜ್ದಾರ್ ಜಿಲ್ಲೆಯ ಬಸ್ ಮೇಲಿನ ಈ ದಾಳಿಯನ್ನು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಈ ದಾಳಿಯ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಇನ್ನೂ ಹೊತ್ತಿಕೊಂಡಿಲ್ಲ. ಆದರೆ, ಈ ಪ್ರದೇಶದಲ್ಲಿ ಇರುವ ಬಲೂಚ್ ಪ್ರತ್ಯೇಕತಾವಾದಿಗಳು ಈ ದಾಳಿಗೆ ಕಾರಣವಾಗಬಹುದು ಎಂದು ಅನುಮಾನಿಸಲಾಗಿದೆ.

ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮಕ್ಕಳ ಸಾವಿನ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳ ಹತ್ಯೆ ನಡೆಸಿದ ದುಷ್ಕರ್ಮಿಗಳನ್ನು ಕ್ರೂರಿಗಳು ಎಂದು ಜರಿದಿದ್ದಾರೆ. ಇದೊಂದು ಅನಾಗರಿಕ ಕೃತ್ಯವಾಗಿದೆ. ಮುಗ್ಧ ಮಕ್ಕಳ ಮೇಲೆ ದಾಳಿ ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಲೂಚಿಸ್ತಾನದಲ್ಲಿ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಮತ್ತು ಇತರ ಪ್ರತ್ಯೇಕತಾವಾದಿ ಗುಂಪುಗಳು ಸತತ ದಾಳಿಗಳನ್ನು ನಡೆಸುತ್ತಿದ್ದು, ಪಾಕಿಸ್ತಾನವು ಇವನ್ನು ಭಯೋತ್ಪಾದಕರಾಗಿ ಗುರುತಿಸಿದೆ. ಈ ಸಂಘಟನೆಗಳು ಪಾಕಿಸ್ತಾನದ ಭದ್ರತೆಯನ್ನು ಗುರಿಯಾಗಿಸಿಕೊಂಡು ನಾನಾ ಪ್ರದೇಶಗಳಲ್ಲಿ ಹಿಂಸಾಚಾರಗಳನ್ನು ಮಾಡುತ್ತಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page