ಸುಪ್ರೀಂಕೋರ್ಟ್ (Supreme Court) ಇತ್ತೀಚೆಗೆ ಹೊರಡಿಸಿದ್ದ ಬೀದಿ ನಾಯಿಗಳನ್ನು ಹಿಡಿದು ಆಶ್ರಯತಾಣಗಳಿಗೆ ಬಿಡುವ ಆದೇಶದಲ್ಲಿ ತಿದ್ದುಪಡಿ ಮಾಡಿದೆ. ಇದೀಗ ರೇಬೀಸ್ ಇರುವ ನಾಯಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.
ರಾಜ್ಯಗಳಿಗೆ ಸುಪ್ರೀಂಕೋರ್ಟ್ ಸೂಚನೆಗಳು
- ಪ್ರತಿಯೊಂದು ವಾರ್ಡಿನಲ್ಲಿ ಆಹಾರ ನೀಡುವ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಲು ಪುರಸಭೆಗಳಿಗೆ ಆದೇಶ.
- ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ನೀಡಲು ಅನುಮತಿ ಇಲ್ಲ.
- ಅತಿಯಾದ ಆಹಾರ ನೀಡುವಿಕೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು; ನಿಯಂತ್ರಣ ಅಗತ್ಯ.
- ದೂರು ನೀಡಲು ಸಹಾಯವಾಣಿ (Helpline) ಸ್ಥಾಪನೆ ಕಡ್ಡಾಯ.
ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ನೀಡುವಿಕೆ ನಿಷೇಧ
- ಬೀದಿಗಳಲ್ಲಿ ನಾಯಿಗಳಿಗೆ ಆಹಾರ ನೀಡಿದರೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ.
- ನಾಯಿಗಳಿಗೆ ಆಹಾರ ನೀಡಲು ಮಾತ್ರ ಮೀಸಲಾದ ಸ್ಥಳಗಳಲ್ಲೇ ಅವಕಾಶ.
ದತ್ತು ಪಡೆಯುವವರ ಜವಾಬ್ದಾರಿ
- ನಾಯಿಗಳನ್ನು ದತ್ತು ಪಡೆಯಲು ಅವಕಾಶ, ಆದರೆ ಮತ್ತೆ ಬೀದಿಗೆ ಬಿಟ್ಟರೆ ಹೊಣೆಗಾರರು ಮಾಲೀಕರು.
- ಅರ್ಜಿದಾರರಿಂದ ₹25,000 ಠೇವಣಿ, ಸರ್ಕಾರೇತರ ಸಂಸ್ಥೆಗಳಿಂದ ₹2 ಲಕ್ಷ ಠೇವಣಿ ಕಡ್ಡಾಯ.
ಶಸ್ತ್ರಚಿಕಿತ್ಸೆ ಮತ್ತು ಆಶ್ರಯ
- ಸಂತಾನಹರಣ ಶಸ್ತ್ರಚಿಕಿತ್ಸೆ (Sterilization) ಬಳಿಕ ನಾಯಿಗಳನ್ನು ಬಿಡುಗಡೆ ಮಾಡಬಹುದು.
- ರೇಬೀಸ್ ಪೀಡಿತ ಅಥವಾ ಆಕ್ರಮಣಕಾರಿ ನಾಯಿಗಳಿಗೆ ಲಸಿಕೆ ಹಾಕಿ ಪ್ರತ್ಯೇಕ ಆಶ್ರಯದಲ್ಲಿ ಇಡಬೇಕು.
ಸುಪ್ರೀಂಕೋರ್ಟ್ ಆದೇಶದ ಉದ್ದೇಶ – ಸಾರ್ವಜನಿಕ ಸುರಕ್ಷತೆ, ನಿಯಂತ್ರಿತ ಆಹಾರ ವಿತರಣೆ ಮತ್ತು ಪ್ರಾಣಿ ಕಲ್ಯಾಣದ ಸಮತೋಲನ.