New Delhi: ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಜಾತಿ ನಿಂದನೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ (Supreme Court) ರದ್ದುಗೊಳಿಸಿದೆ.
ದೂರುದಾರರ ಪ್ರಕಾರ, ಆರೋಪಿ ತಮ್ಮನ್ನು ಜಾತಿ ಆಧಾರಿತ ಪದಗಳಿಂದ ನಿಂದಿಸಿ, ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ್ದಾನೆ. ಅಲ್ಲದೆ ಅವರ ಕುಟುಂಬದವರ ಮೇಲೂ ದೌರ್ಜನ್ಯ ನಡೆಸಿ, ಮನೆಯನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ.
ಸುಪ್ರೀಂ ಕೋರ್ಟ್ ಹೇಳಿಕೆಯ ಪ್ರಕಾರ, ಆರೋಪಿ ಬಳಸಿದ ಪದಗಳು ಜಾತಿಯ ಆಧಾರದ ಮೇಲೆ ಅವಮಾನ ಮಾಡುವ ಉದ್ದೇಶ ಹೊಂದಿರುವುದು ಸ್ಪಷ್ಟವಾಗಿದೆ. “SC/ST ಕಾಯ್ದೆ, 1989ರ ಸೆಕ್ಷನ್ 18 ಪ್ರಕಾರ, ನಿರೀಕ್ಷಣಾ ಜಾಮೀನು (CrPC ಸೆಕ್ಷನ್ 438) ನೀಡುವುದನ್ನು ನಿಷೇಧಿಸಲಾಗಿದೆ. ಆದರೆ, ಮೇಲ್ನೋಟಕ್ಕೆ ಅಪರಾಧವೇ ಆಗಿಲ್ಲ ಎಂದು ಕಂಡುಬಂದರೆ ಮಾತ್ರ ನಿರೀಕ್ಷಣಾ ಜಾಮೀನು ನೀಡಬಹುದು” ಎಂದು ಕೋರ್ಟ್ ಸ್ಪಷ್ಟಪಡಿಸಿದೆ.