Home News Suryakumar Yadav ಬ್ಯಾಟ್ ಮೌನ– Team Indiaದ ಸಂಕಟ

Suryakumar Yadav ಬ್ಯಾಟ್ ಮೌನ– Team Indiaದ ಸಂಕಟ

Suryakumar Yadav

ಭಾರತ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡುತ್ತಿದ್ದು, ಮೂರನೇ ಪಂದ್ಯದಲ್ಲಿ ಸೋಲು ಕಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಟಾಪ್ ಆರ್ಡರ್ ವಿಫಲವಾಯಿತು. ಮೊದಲೆರಡು ಪಂದ್ಯಗಳಲ್ಲಿ ಚಮಕಿಸಿದ ಆಟಗಾರರು ಜವಾಬ್ದಾರಿ ಮರೆತು ಹೋದರು.

ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದ ಸೂರ್ಯಕುಮಾರ್ ಯಾದವ್ ಈ ಸರಣಿಯಲ್ಲಿ ತನ್ನ ಫಾರ್ಮ್ ಕಾಣದಂತೆ ತೋರುತ್ತಿದ್ದಾರೆ. ರನ್ ಗಳಿಸುವ ಸಾಮರ್ಥ್ಯ ಅವರನ್ನು ತೊರೆದುಹೋಗಿರುವಂತೆ ಕಂಡುಬಂದಿದೆ. ರಾಜ್ಕೋಟ್ ನಲ್ಲಿಯೂ ಅವರ ವೈಫಲ್ಯ ಮುಂದುವರಿದಿದ್ದು, ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದೆ.

ಸೂರ್ಯಕುಮಾರ್ ನಾಯಕನಾದ ನಂತರ ಅವರ ಆಟದ ಮೇಲೆ ಪ್ರಭಾವ ಬೀಳುತ್ತಿದೆ. 20 ಪಂದ್ಯಗಳಲ್ಲಿ ನಾಯಕತ್ವ ವಹಿಸಿರುವ ಅವರು 19 ಇನಿಂಗ್ಸ್ ಆಡಿದ್ದು, 29.26 ಸರಾಸರಿಯಲ್ಲಿ 556 ರನ್ ಗಳಿಸಿದ್ದಾರೆ. ಆದರೆ ಈ ಅವಧಿಯಲ್ಲಿ ಅವರ ಸ್ಥಿರತೆ ಕುಸಿದಿದೆ.

ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟರ್ ಎನ್ನಲಾಗಿದೆ. 88 ಪಂದ್ಯಗಳ 77 ಇನಿಂಗ್ಸ್‌ಗಳಲ್ಲಿ 39.33 ಸರಾಸರಿಯಲ್ಲಿ 2596 ರನ್ ಗಳಿಸಿದ್ದು, 4 ಶತಕ ಮತ್ತು 21 ಅರ್ಧಶತಕ ಸಿಡಿಸಿದ್ದಾರೆ. ಆದರೆ ನಾಯಕತ್ವ ಹೊತ್ತುಕೊಂಡ ಬಳಿಕ ಅವರ ಆಟದಲ್ಲಿ ಹಿಂಜರಿಕೆ ಕಾಣುತ್ತಿದೆ.

ಸೂರ್ಯಕುಮಾರ್ ತನ್ನ ಹಳೆಯ ಲಯವನ್ನು ಮರಳಿ ಪಡೆಯಬೇಕಾದ ಅಗತ್ಯ ಇದೆ. ಟೀಮ್ ಇಂಡಿಯಾಗೆ ಅವರು ತಮ್ಮ ಬ್ಯಾಟ್ ಮೂಲಕ ಗೆಲುವಿನ ಹಾದಿ ತೋರಿಸಬೇಕಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version