Kathmandu: ನೇಪಾಳದಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತಕ್ಕೆ ವಿರುದ್ಧ ಯುವಕರು ಮುಂದುವರೆಸಿ ನಡೆಸುತ್ತಿರುವ ಪ್ರತಿಭಟನೆಗಳು ಇದೀಗ ನಿಧಾನವಾಗಿ ಶಾಂತವಾಗುತ್ತಿದೆ. ಇತ್ತೀಚೆಗೆ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ಸಂಬಂಧ ಎಲ್ಲ ಸಿದ್ಧತೆಗಳು ನಡೆಯುತ್ತಿದ್ದವೆ.
ಪ್ರಧಾನಿ ಸ್ಥಾನಕ್ಕೆ ಸುಶೀಲಾ ಕರ್ಕಿ ನೇಮಕಾತಿ ಮೂಲಕ ಶಾಂತಿ ಸ್ಥಾಪನೆ ಮತ್ತು ಆಡಳಿತ ಸುಗಮಗೊಳಿಸುವ ಉದ್ದೇಶವಿದೆ. ಅಧ್ಯಕ್ಷರ ಕಚೇರಿ ಸಿಬ್ಬಂದಿಗೆ ಹೊಸ ಪ್ರಧಾನಿಯನ್ನು ಸ್ವಾಗತಿಸಲು ಸೂಚನೆ ನೀಡಲಾಗಿದೆ. ರಾಜಕೀಯ ಪಕ್ಷಗಳ ಒಪ್ಪಂದದ ನಂತರ ಸಚಿವಾಲಯದಲ್ಲಿ ವ್ಯವಸ್ಥೆಗಳನ್ನು ಪ್ರಾರಂಭಿಸಲು ಸೂಚನೆ ನೀಡಲಾಗಿದೆ.
ಸುಶೀಲಾ ಕರ್ಕಿ, ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಮತ್ತು ಗೌರವಾನ್ವಿತ ನ್ಯಾಯಶಾಸ್ತ್ರಜ್ಞ, ಸ್ಥಿರತೆಯನ್ನು ಪುನಃಸ್ಥಾಪಿಸಲು ಹಾಗೂ ಪಕ್ಷಾತೀತ ನಾಯಕತ್ವ ನೀಡಲು ತಕ್ಕ ವ್ಯಕ್ತಿ ಎಂದು ಪರಿಗಣಿಸಲಾಗುತ್ತಿದೆ.
ಹಿಂದೆ, ನೇಪಾಳ ವಿದ್ಯುತ್ ಪ್ರಾಧಿಕಾರದ ಮಾಜಿ ಮುಖ್ಯಸ್ಥ ಕುಲ್ಮನ್ ಘಿಸಿಂಗ್ ಅವರ ಹೆಸರು ಸಂಭಾವ್ಯ ಅಭ್ಯರ್ಥಿಯಾಗಿ ತಿಳಿದಿದ್ದರೂ, ಕೊನೆಗೆ ಮಧ್ಯಂತರ ಪ್ರಧಾನಿಯಾಗಿ ಸುಶೀಲಾ ಕರ್ಕಿ ಮುಂದಾಗಿದ್ದಾರೆ.
ಇದಕ್ಕೂ ಮೊದಲು, ದೇಶಾದ್ಯಂತ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಗಳು ನಡೆದವು. Gen Z ಯುವ ಸಮೂಹ ಪ್ರಮುಖವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಭಟನೆ ನಡೆಸಿತು. ಈ ಘರ್ಷಣೆಯಲ್ಲಿ 34 ಜನ ಸಾವನ್ನಪ್ಪಿದ್ದಾರೆ, 1,000 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.