ಭಾರತದಲ್ಲಿ ಮನೆ ಮನೆಗೆ ಆಹಾರ ತಲುಪಿಸುವ ಪ್ರಚಲಿತ ತಂತ್ರಜ್ಞಾನ ಪ್ಲಾಟ್‌ಫಾರ್ಮ್‌ಗಳಾದ Zomato ಮತ್ತು Swiggy ಹೊಸ ವರ್ಷದ (New Year) ಮುನ್ನಾದಿನದಂದು ದಾಖಲೆ ಸಂಖ್ಯೆಯಲ್ಲಿ ತಿಂಡಿ-ತಿನಿಸುಗಳ ಸರಬರಾಜಿನ Orders ಪೂರೈಸಿದೆ. Zomato ಪ್ರತಿ ನಿಮಿಷಕ್ಕೆ 7,100 ಕೋರಿಕೆಗಳನ್ನು ಪಡೆದರೆ, Swiggy ಡಿಸೆಂಬರ್ 31, 2021 ರಂದು ರಾತ್ರಿ 8:20 ರ ವೇಳೆಗೆ ಪ್ರತಿ ನಿಮಿಷಕ್ಕೆ 9,000 ಆರ್ಡರ್‌ಗಳನ್ನು ದಾಟಿದೆ.
ಜನರು Omicron ಭಯದ ನಡುವೆ ಮನೆಯಲ್ಲಿಯೇ ಪಾರ್ಟಿ ಮಾಡಲು ಮತ್ತು Online ನಲ್ಲಿ ಆಹಾರವನ್ನು ಆರ್ಡರ್ ಮಾಡಲು ನಿರ್ಧರಿಸಿರುವುದು ಇದಕ್ಕೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಸತತವಾಗಿ ಎರಡನೇ ವರ್ಷ ಎರಡೂ ಪ್ಲಾಟ್‌ಫಾರ್ಮ್‌ಗಳು ಆನ್‌ಲೈನ್‌ನಲ್ಲಿ ಆಹಾರ ಪೂರೈಕೆಗೆ ಅಗಾಧ ಬೇಡಿಕೆಯನ್ನು ಕಂಡಿದ್ದು, ತಮ್ಮದೇ ಆದ ಹಿಂದಿನ ದಾಖಲೆಗಳನ್ನು ಮುರಿದಿವೆ.
Zomato ನ ಹಿಂದಿನ ದಾಖಲೆಯು ನಿಮಿಷಕ್ಕೆ 4,000 ಕ್ಕಿಂತ ಹೆಚ್ಚು ಆರ್ಡರ್‌ಗಳನ್ನು ಪಡೆಯುವುದಾದರೆ, Swiggy ಕಳೆದ ಹೊಸ ವರ್ಷದ ಮುನ್ನಾದಿನದಂದು ನಿಮಿಷಕ್ಕೆ 5,000 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಗಳಿಸಿತ್ತು.
Image: Swiggy