back to top
22.9 C
Bengaluru
Friday, August 29, 2025
HomeEntertainmentRohit Shetty ವಿರುದ್ಧ T-Series ದೂರು

Rohit Shetty ವಿರುದ್ಧ T-Series ದೂರು

- Advertisement -
- Advertisement -

ನವೆಂಬರ್ 1 ರಂದು ರೋಹಿತ್ ಶೆಟ್ಟಿ (Rohit Shetty) ನಿರ್ದೇಶನ ಮಾಡಿ ಸಹ ನಿರ್ಮಾಪಕರೂ ಆಗಿರುವ ‘Singham Again’ ಸಿನಿಮಾ ಬಿಡುಗಡೆ ಆಗುತ್ತಿದೆ. ಅದೇ ದಿನ ಬಾಲಿವುಡ್​ನ (Bollywood) ಜನಪ್ರಿಯ ಸಿನಿಮಾ ಸರಣಿ ‘ಭೂಲ್ ಭುಲಯ್ಯ’ ದ ಮೂರನೇ ಭಾಗ ‘Bhool Bhulayya 3’ ಬಿಡುಗಡೆ ಆಗುತ್ತಿದೆ.

ಆದರೆ ರೋಹಿತ್ ಶೆಟ್ಟಿ ತಮ್ಮ ಸಿನಿಮಾವನ್ನು ನಿಯಮಬಾರಿವಾಗಿ, ಸ್ಪರ್ಧಾ ಸ್ಪೂರ್ತಿ ಮರೆತು ಬಿಡುಗಡೆ ಹಾಗೂ ವಿತರಣೆ ಮಾಡುತ್ತಿದ್ದಾರೆ ಎಂದು ‘ಭೂಲ್ ಭುಲಯ್ಯ 3’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಟಿ-ಸೀರೀಸ್ (T-Series) ಆರೋಪ ಮಾಡಿದೆ.

ಅಲ್ಲದೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೂ ಸಹ ಎಲ್ಲ ಶೋ ಅನ್ನು ‘ಸಿಂಘಂ ಅಗೇನ್​’ಗೆ ನೀಡುವಂತೆ ರೋಹಿತ್ ಶೆಟ್ಟಿ ಮತ್ತು ತಂಡ ಸೂಚನೆ ನೀಡಿದ್ದು, ಹಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ‘ಸಿಂಘಂ ಸಿನಿಮಾವನ್ನು ಮಾತ್ರವೇ ಪ್ರದರ್ಶಿಸುತ್ತಿವೆ. ‘ಭೂಲ್ ಭುಲಯ್ಯ 3’ಗೆ ಕೆಲವು ಕಡೆ ಕೇವಲ ಅರ್ಲಿ ಮಾರ್ನಿಂಗ್ ಶೋ ಅನ್ನಷ್ಟೆ ನೀಡಲಾಗಿದೆಯಂತೆ.

ಈ ಅನ್ಯಾಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಟಿ-ಸೀರೀಸ್, ಸಿಸಿಐ (ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ)ಕ್ಕೆ ದೂರು ನೀಡಿದೆ. ಅಸ್ಪರ್ಧಾತ್ಮಕ ವಿಧಾನದ ಮೂಲಕ ವ್ಯಾಪಾರ ಮಾಡಲಾಗುತ್ತಿದೆ. ಸಿಸಿಐ ಮಧ್ಯಸ್ಥಿಕೆವಹಿಸಿ 50-50ರ ಅನುಪಾತದಲ್ಲಿ ಸ್ಕ್ರೀನ್​ಗಳ ವಿತರಣೆಗೆ ಪಿವಿಆರ್-ಐನಾಕ್ಸ್​ಗೆ ಸೂಚಿಸಬೇಕು ಎಂದು ಮನವಿ ಮಾಡಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page