Home Health ಊಟದ ನಂತರ short nap ಒಳ್ಳೆಯದೇ? Experts ಮಾಹಿತಿ

ಊಟದ ನಂತರ short nap ಒಳ್ಳೆಯದೇ? Experts ಮಾಹಿತಿ

Is Afternoon Short nap Sleep Good for health?

ಸಾಮಾನ್ಯವಾಗಿ ಸಾಕಷ್ಟು ಜನ ಮಧ್ಯಾಹ್ನದ ಊಟದ ನಂತರ ಮಲಗುವ (Afternoon Nap) ಅಥವಾ ಸ್ವಲ್ಪ ಸಮಯದ ವರೆಗೆ ಕಿರು ನಿದ್ದೆ (short nap) ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಊಟದ ನಂತರ ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದು ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ.

ಹಾಗಾಗಿ ನಿಮಗೆ ಏಕಕಾಲದಲ್ಲಿ ಮಂಪರು ಮತ್ತು ದಣಿವನ್ನು ಉಂಟುಮಾಡುತ್ತದೆ. ಆದರೆ ಹಗಲಿನಲ್ಲಿ ಮಲಗುವುದು ಆರೋಗ್ಯಕ್ಕೆ ಒಳ್ಳೆಯದೇ?

ನಿಮ್ಮ ಆರೋಗ್ಯಕ್ಕೆ ಮಧ್ಯಾಹ್ನದ ನಿದ್ರೆ ಯಾವ ರೀತಿಯ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದರ ಬಗ್ಗೆ ತಜ್ಞರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ವೈದ್ಯರು ಸಾಮಾನ್ಯವಾಗಿ 7 ರಿಂದ 8 ಗಂಟೆಗಳ ನಿದ್ರೆ ಒಳ್ಳೆಯದು ಎಂದು ಹೇಳುತ್ತಾರೆ.

ಹೆಚ್ಚುತ್ತಿರುವ ಕೆಲಸದ ಹೊರೆ, ಬಿಡುವಿಲ್ಲದ ಜೀವನಶೈಲಿ ಮತ್ತು ಒತ್ತಡದ ಸಂದರ್ಭಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ, ಮಧ್ಯಾಹ್ನದ ನಿದ್ರೆ ಉಲ್ಲಾಸ ನೀಡುತ್ತದೆ ಜೊತೆಗೆ ದಣಿವನ್ನು ಕಡಿಮೆ ಮಾಡುತ್ತದೆ.

ಮಧ್ಯಾಹ್ನದ ನಿದ್ರೆಯು ದೇಹವನ್ನು ಮಾತ್ರವಲ್ಲದೆ ಮನಸ್ಸನ್ನೂ ವಿಶ್ರಾಂತಿಗೊಳಿಸುತ್ತದೆ.

ದಿನಕ್ಕೆ ಸುಮಾರು 1 ಗಂಟೆ ಮಲಗುವುದು ಇಡೀ ದೇಹದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಅಲ್ಲದೆ, ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ಅದಕ್ಕಿಂತ ಹೆಚ್ಚಿನ ನಿದ್ದೆ ಮಧ್ಯಾಹ್ನದ ಸಮಯದಲ್ಲಿ ಒಳ್ಳೆಯದಲ್ಲ.

ಆದರೆ, ಮಧ್ಯಾಹ್ನ ಅರ್ಧ ಗಂಟೆ ಅಥವಾ 1 ಗಂಟೆಗಿಂತ ಹೆಚ್ಚು ನಿದ್ರೆ ಮಾಡಬೇಡಿ. ಇದಕ್ಕಿಂತ ಹೆಚ್ಚು ಸಮಯ ಮಲಗುವುದು ನಿಮ್ಮ ದೇಹದ ಜೈವಿಕ ಗಡಿಯಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ರಾತ್ರಿ ನೈಸರ್ಗಿಕವಾಗಿ ಬರುವ ನಿದ್ರೆಗೆ ಇದು ಅಡ್ಡಿಯಾಗುತ್ತದೆ. ಆದ್ದರಿಂದ ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಮಾಡುವವರು ಹಗಲಿನಲ್ಲಿ ಅರ್ಧ ಗಂಟೆಗಿಂತ ಹೆಚ್ಚು ನಿದ್ರೆ ಮಾಡಬಾರದು ಎಂದು ವೈದ್ಯರು ಹೇಳುತ್ತಾರೆ.


ಮಕ್ಕಳಿಗೆ ಮಧ್ಯಾಹ್ನದ ನಿದ್ರೆ ಒಳ್ಳೆಯದಲ್ಲ

ಶಾಲಾ ವಿದ್ಯಾರ್ಥಿಗಳು ಮನೆಗೆ ಬಂದ ಮೇಲೆ ಅಂದರೆ ಸಾಮಾನ್ಯವಾಗಿ 3 ಗಂಟೆಯ ನಂತರ ಶಾಲೆಯಿಂದ ಮನೆಗೆ ಬಂದರೆ. ಅವರನ್ನು ಆಡಲು ಬಿಡಿ.

ಈ ರೀತಿ ಮಾಡಿದರೆ, ಮಕ್ಕಳು ರಾತ್ರಿ ಬೇಗನೆ ಮಲಗಲು ಒಗ್ಗಿಕೊಳ್ಳುತ್ತಾರೆ. ಮಧ್ಯಾಹ್ನ 3 ಗಂಟೆಯ ನಂತರ ಮಲಗುವುದರಿಂದ ರಾತ್ರಿಯಲ್ಲಿ ಮಕ್ಕಳ ನಿದ್ರೆಗೆ ಭಂಗವಾಗುತ್ತದೆ.

ಹಾಗಾಗಿ ಮಕ್ಕಳು ಮಧ್ಯಾಹ್ನದ ಸಮಯದಲ್ಲಿ ಮಲಗುವುದು ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version