Tamil Nadu : ತಮಿಳುನಾಡಿನ ಹೊಸೂರಿನಲ್ಲಿರುವ (Hosur) ಟಾಟಾ ಗ್ರೂಪ್‌ನ (TATA Group) ಉತ್ಪಾದನಾ ಘಟಕದಲ್ಲಿ ಶನಿವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ (Fire Accident) ಸಂಭವಿಸಿದೆ. Tata Electronics Private Limited (TEPL) ನಲ್ಲಿ ಸಂಭವಿಸಿದ ಬೆಂಕಿ ಅವಘಡವು ಬೃಹತ್ ಬೆಂಕಿ ಮತ್ತು ಹೊಗೆಯನ್ನು ಸೂಸುತ್ತಿರುವ ದೃಶ್ಯವನ್ನು ಸುದ್ದಿ ಸಂಸ್ಥೆಗಳಾದ IANS ಮತ್ತು PTI ವರದಿ ಮಾಡಿದೆ.
ಕಂಪನಿಯ ಸೆಲ್‌ಫೋನ್ ತಯಾರಿಕಾ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಎಲ್ಲಾ ಉದ್ಯೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಅಗ್ನಿಶಾಮಕ ದಳಗಳು ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.
ಘಟನೆಗೆ TEPL ಪ್ರತಿಕ್ರಿಯೆ ನೀಡಿದ್ದು, “ತಮಿಳುನಾಡಿನ ಹೊಸೂರಿನಲ್ಲಿರುವ ನಮ್ಮ ಸ್ಥಾವರದಲ್ಲಿ ದುರದೃಷ್ಟಕರ ಘಟನೆ ನಡೆದಿದೆ. ನಮ್ಮ ತುರ್ತು ಪ್ರೋಟೋಕಾಲ್‌ಗಳು ಎಲ್ಲಾ ಉದ್ಯೋಗಿಗಳ ಸುರಕ್ಷತೆಯನ್ನು ಖಾತ್ರಿಪಡಿಸಿದೆ. ಬೆಂಕಿಯ ಕಾರಣದ ಕುರಿತು ತನಿಖೆ ನಡೆಯುತ್ತಿದ್ದು, ನಮ್ಮ ಉದ್ಯೋಗಿಗಳು ಮತ್ತು ಇತರ ಪಾಲುದಾರರನ್ನು ರಕ್ಷಿಸಲು ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.” ಎಂದು ತಿಳಿಸಲಾಗಿದೆ.