ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್ (Tata Motors) ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 1,297 ಬಸ್ ಗಳನ್ನು ಪೂರೈಸಲು ಬೃಹತ್ ಆರ್ಡರ್ ಪಡೆದಿದೆ. ಈ ಬಸ್ ಗಳನ್ನು ಹಂತ – ಹಂತವಾಗಿ ಸಾರಿಗೆ ನಿಗಮಕ್ಕೆ ಹಸ್ತಾಂತರ ಮಾಡಲಾಗುತ್ತದೆ. ಈ ವರ್ಷ ಟಾಟಾ ಮೋಟಾರ್ಸ್, ಉ.ಪ್ರದೇಶ ಸಾರಿಗೆ ನಿಗಮಕ್ಕೆ ಒಟ್ಟು 3,500 ಬಸ್ ಗಳ ಪೂರೈಕೆಗೆ ಒಡಂಬಡಿಕೆ ಮಾಡಿಕೊಂಡಿದೆ.
ಟಾಟಾ ಮೋಟಾರ್ಸ್ ಎಲ್ಪಿಒ 1618 ಡೀಸೆಲ್ ಬಸ್ ಗಳ ಚಾಸಿಸ್ ಗಳನ್ನು ಪೂರೈಕೆ ಮಾಡುವುದಾಗಿ ಹೇಳಿದೆ. ಇವು ಹತ್ತಿರದ ನಗರಗಳು ಮತ್ತು ದೂರದ ಪ್ರಯಾಣಕ್ಕೆ ಸೂಕ್ತವಾಗಿವೆ. ಟಾಟಾ ಮೋಟಾರ್ಸ್ ಹಿರಿಯ ಅಧಿಕಾರಿ ಆನಂದ್ ಎಸ್ ಹೇಳಿದ್ದಾರೆ, “ಯುಪಿಎಸ್ಆರ್ಟಿಸಿ ಕಂಪನಿಗೆ ಬಸ್ ಗಳ ಚಾಸಿಸ್ ಪೂರೈಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನಾವು ಸಾರಿಗೆ ನಿಗಮದ ಮಾರ್ಗದರ್ಶನವನ್ನು ಅನುಸರಿಸೋಣ.”
ವಾಣಿಜ್ಯ ವಾಹನ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಜೊತೆಗೆ ಅಶೋಕ್ ಲೇಲ್ಯಾಂಡ್ ಸಹ ಮುಂಚೂಣಿಯಲ್ಲಿ ಇದೆ. ಅಶೋಕ್ ಲೇಲ್ಯಾಂಡ್, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಹಲವಾರು ಬಸ್ ಗಳ ಪೂರೈಕೆಯನ್ನು ಮಾಡುತ್ತಿದೆ.
2024ರ ಅಕ್ಟೋಬರಿನಲ್ಲಿ, ಅಶೋಕ್ ಲೇಲ್ಯಾಂಡ್, 2,104 ಬಸ್ ಗಳನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಪೂರೈಸಲು ಒಪ್ಪಂದ ಮಾಡಿಕೊಂಡಿತ್ತು. 500 ಇ-ಬಸ್ ಗಳನ್ನು ಚೆನ್ನೈ ಮಹಾನಗರ ಸಾರಿಗೆ ಸಂಸ್ಥೆಗೆ ಪೂರೈಕೆ ಮಾಡಲಾಯಿತು.