Tata Nexon CNG: ಗ್ರಾಹಕರ ಕೈಗೆಟಕುವ ದರದಲ್ಲಿ ಎಲ್ಲಾ ಕಂಪನಿಗಳು ಸ್ಪರ್ಧೆಯ ರೀತಿಯಲ್ಲಿ ಹೊಸ ಹೊಸ ಮಾದರಿಯ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಅದರಲ್ಲೂ ಟಾಟಾ (Tata) ಕಂಪನಿಯ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಇದೀಗ ತನ್ನ ನೆಕ್ಸಾನ್ (Nexon) ಅನ್ನು ಸಿಎನ್‌ಜಿ (CNG ) ರೂಪಾಂತರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.
ಇದರ ವಿಶೇಷತೆ
ಟಾಟಾ ನೆಕ್ಸಾನ್ ಸಿಎನ್‌ಜಿಯನ್ನು (Tata Nexon CNG) 1.2 ಲೀಟರ್ ಟರ್ಬೋಚಾರ್ಜ್ಡ್ 3-ಸಿಲಿಂಡರ್ (Cylinder) ಪೆಟ್ರೋಲ್ ಎಂಜಿನ್‌ನೊಂದಿಗೆ (turbocharged petrol engine) ನೀಡಲಾಗುವುದು ಮತ್ತು ಟರ್ಬೋಚಾರ್ಜ್ಡ್ ಎಂಜಿನ್ (turbocharged engine) ಹೊಂದಿರುವ ದೇಶದ ಮೊದಲ ಸಿಎನ್‌ಜಿ ಎಸ್‌ಯುವಿ (CNG SUV) ಆಗಿದೆ. ಟಾಟಾ ಮೋಟಾರ್ಸ್ (Tata Motors) ತನ್ನ ಸಿಎನ್‌ಜಿ ಕಾರುಗಳಲ್ಲಿ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತದೆ. ಆದ್ದರಿಂದ ನೆಕ್ಸಾನ್ ಸಿಎನ್‌ಜಿ (Nexon CNG) ಅತ್ಯಂತ ಸುರಕ್ಷಿತ ಕಾರಾಗಿರುತ್ತದೆ ಎಂದು ಹೇಳಲಾಗುತ್ತಿದೆ.
ಟಾಟಾ ನೆಕ್ಸಾನ್ ಸಿಎನ್‌ಜಿಯಲ್ಲಿ (Tata Nexon CNG) ದೊಡ್ಡ ಟಚ್‌ಸ್ಕ್ರೀನ್ (touch screen) ಇನ್ಫೋಟೈನ್‌ಮೆಂಟ್ ಸಿಸ್ಟಮ್ (infotainment system) ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, (digital instrument cluster) 360 ಡಿಗ್ರಿ ಕ್ಯಾಮೆರಾ, ಇದರ ದರ ಬಹಿರಂಗವಾಗಬೇಕಿದೆ. ಒಟ್ಟಿನಲ್ಲಿ ಟಾಟಾ ಕಂಪನಿ ತಾವೇನೂ ಯಾವ ಕಂಪನಿಗಳಿಗೂ ಕಡಿಮೆಯಿಲ್ಲವೆಂಬಂತೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಾರುಗಳನ್ನು ಮಾರುಕಟ್ಟೆಗೆ ತರುತ್ತಲೇ ಇದೆ.