ಭಾರತ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ (Gautam Gambhir ) ಅವರಿಗೆ “”ISIS Kashmir” ಎಂಬ ಇಮೇಲ್ ಖಾತೆಯಿಂದ ಕೊಲೆ ಬೆದರಿಕೆ ಸಂದೇಶ ಬಂದಿದೆ. ಈ ಬೆದರಿಕೆ ಇಮೇಲ್ ಬಗ್ಗೆ ಅವರು ದೆಹಲಿಯ ರಾಜೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಏಪ್ರಿಲ್ 22ರಂದು ಗಂಭೀರ್ ಅವರಿಗೆ ಎರಡು ಭಯಾನಕ ಇಮೇಲ್ ಸಂದೇಶಗಳು ಬಂದಿವೆ – ಒಂದು ಮಧ್ಯಾಹ್ನ ಮತ್ತು ಇನ್ನೊಂದು ಸಂಜೆ. ಇವುಗಳಲ್ಲಿ “I Kill You” ಎಂಬ ಸಂದೇಶವಿತ್ತು. ಗಂಭೀರ್ ಕೂಡಲೇ ಪೊಲೀಸ್ ಠಾಣೆಗೆ ಹೋಗಿ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ತಮ್ಮ ಕುಟುಂಬದ ಭದ್ರತೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದು ಗಂಭೀರ್ ಅವರಿಗೆ ಮೊದಲ ಬಾರಿಗೆ ಕೊಲೆ ಬೆದರಿಕೆ ಬರುವುಲ್ಲ. 2021ರಲ್ಲಿ ಅವರು ಬಿಜೆಪಿ ಸಂಸದರಾಗಿ ಕೆಲಸ ಮಾಡುತ್ತಿದ್ದಾಗ ಕೂಡ ಇದೇ ರೀತಿಯ ಇಮೇಲ್ ಸಂದೇಶ ಬಂದಿತ್ತು.
ಇತ್ತೀಚೆಗೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಗಂಭೀರ್ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ, ದೇಶದ ಭದ್ರತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದಾದ ಬಳಿಕವೇ ಈ ಹೊಸ ಕೊಲೆ ಬೆದರಿಕೆ ಸಂದೇಶ ಬಂದಿದೆ.
ಗಂಭೀರ್ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದು, ಅವರಿಗೆ ಹಾಗೂ ಅವರ ಕುಟುಂಬಕ್ಕೆ ಭದ್ರತೆ ಒದಗಿಸಲಾಗಿದೆ.