ಭಾರತ vs ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್: ಎಡ್ಜ್ಬಾಸ್ಟನ್ ನಲ್ಲಿ (Edgbaston) ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಇಂಗ್ಲೆಂಡ್‌ಗೆ 608 ರನ್ ಗುರಿ ನೀಡಿದ ಭಾರತ, ಆಂಗ್ಲ ತಂಡವನ್ನು 336 ರನ್‌ಗಳಿಗೆ ಅಡಕಿಸಿ ಸರಣಿಯನ್ನು 1-1ರಿಂದ ಸಮಬಲಗೊಳಿಸಿತು.
ಗಿಲ್ ನಿಂದ ದಾಖಲೆ ಸಾಧನೆ: ನಾಯಕ ಶುಭ್ಮನ್ ಗಿಲ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಅವರು 269 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 161 ರನ್ ಬಾರಿಸಿದರು. ಇದರಿಂದ ಒಟ್ಟು 430 ರನ್ ಗಳಿಸಿ, ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರಾದರು.
ಗವಾಸ್ಕರ್ ರೆಕಾರ್ಡ್ ಮುರಿದ ಗಿಲ್: ಟೆಸ್ಟ್ ಸರಣಿಯಲ್ಲಿ ಗಿಲ್ ಒಟ್ಟು 585 ರನ್ ಗಳಿಸಿದ್ದು, ಈ ಮೂಲಕ ಸುನಿಲ್ ಗವಾಸ್ಕರ್ ಅವರ 542 ರನ್ ದಾಖಲೆಯನ್ನು ಮುರಿದರು. ಇಂದಿನ ದಿನಗಳಲ್ಲಿ ಇದು ದೊಡ್ಡ ಸಾಧನೆಯಾಗಿದೆ.
ಟಿ-ಶರ್ಟ್ ಬದಲುಗಳಿಂದ ಉಂಟಾದ ವಿವಾದ: ದ್ವಿತೀಯ ಇನ್ನಿಂಗ್ಸ್‌ನಲ್ಲಿ ಡಿಕ್ಲರೇಶನ್ ಘೋಷಿಸಲು ಗಿಲ್ ಮೈದಾನಕ್ಕೆ ಬಂದಾಗ ಅವರು ನೈಕ್ ಲೋಗೋವಿರುವ ಕಪ್ಪು ಟೀ-ಶರ್ಟ್ ಧರಿಸಿದ್ದರು. ಆದರೆ, ಭಾರತ ತಂಡದ ಅಧಿಕೃತ ಕಿಟ್ ಪ್ರಾಯೋಜಕ ಅಡಿಡಾಸ್ ಆಗಿದ್ದು, ಬಿಸಿಸಿಐ ನಿಯಮಗಳ ಪ್ರಕಾರ ಆಟಗಾರರು ಬೇರೆ ಕಂಪನಿಯ ಲೋಗೋ ಇರುವ ಉಡುಪನ್ನು ಧರಿಸಬಾರದು.
ಈ ಘಟನೆಗೆ ಸಂಬಂಧಿಸಿದಂತೆ ಬಿಸಿಸಿಐ ಗಿಲ್ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಹಿಂದೆ 2006-07ರಲ್ಲಿ ಸೌರವ್ ಗಂಗೂಲಿ ಕೂಡ ಬೇರೆ ಬ್ರ್ಯಾಂಡ್ ಹೆಡ್ಬ್ಯಾಂಡ್ ಧರಿಸಿದ್ದಕ್ಕಾಗಿ ಶಿಕ್ಷೆ ಎದುರಿಸಿದ್ದರು.