ಬಲೂಚಿಸ್ತಾನ: ಭಯೋತ್ಪಾದಕ ದಾಳಿಗಳ ಹೆಚ್ಚಳ (Terrorist threat) ಹಿನ್ನೆಲೆಯಲ್ಲಿ ಬಲೂಚಿಸ್ತಾನ (Balochistan) ಸರ್ಕಾರ ಪ್ರಮುಖ ಹೆದ್ದಾರಿಗಳಲ್ಲಿ ರಾತ್ರಿ ಸಂಚಾರವನ್ನು ನಿಷೇಧಿಸಿರುವುದಾಗಿ ಡಾನ್ ನ್ಯೂಸ್ ವರದಿ ಮಾಡಿದೆ. ಈ ಆದೇಶದೊಂದಿಗೆ ನಾಗರಿಕರು ರಾತ್ರಿ ಹೊತ್ತಿನಲ್ಲಿ ಹೆದ್ದಾರಿಗಳಲ್ಲಿ ಸಂಚರಿಸಲು ಅವಕಾಶವಿರುವುದಿಲ್ಲ.
ಪ್ರಾಂತ್ಯದಾದ್ಯಂತ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿಗಳು ಹೆಚ್ಚಿದ ಹಿನ್ನೆಲೆಯಲ್ಲಿ ಈ ನಿರ್ಬಂಧ ಜಾರಿಗೊಳಿಸಲಾಗಿದೆ. ಈ ವರ್ಷ ಮಾತ್ರ ಹಲವಾರು ಮಾರಣಾಂತಿಕ ದಾಳಿಗಳು ಸಂಭವಿಸಿದ್ದು, ಭದ್ರತೆಯನ್ನು ಬಲಪಡಿಸುವ ಅಗತ್ಯ ತೀವ್ರಗೊಂಡಿದೆ.
ಗ್ವಾದರ್, ಕಛಿ, ಝೋಬ್, ನೊಶ್ಕಿ ಮತ್ತು ಮುಸಾಖೇಲ್ ಜಿಲ್ಲೆಗಳಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕ್ವೆಟ್ಟಾ ನಗರದಿಂದ ರಾತ್ರಿ ಪ್ರಯಾಣಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು, ಕ್ವೆಟ್ಟಾ ಆಡಳಿತ ಈ ಸಂಬಂಧ ಆದೇಶ ಹೊರಡಿಸಿದೆ.
ಕ್ವೆಟ್ಟಾ ಆಯುಕ್ತ ಹಮ್ಜಾ ಶಫ್ಕತ್ ಅವರ ಪ್ರಕಾರ, ಸಿಂಧ್-ಬಲೂಚಿಸ್ತಾನ ಸಂಪರ್ಕಿಸುವ ಕರಾಚಿ-ಕ್ವೆಟ್ಟಾ ಹೆದ್ದಾರಿ (ಎನ್-25) ಮೇಲೆ ರಾತ್ರಿ ಪ್ರಯಾಣವನ್ನು ನಿಷೇಧಿಸಲಾಗಿದೆ. ಪ್ರಯಾಣದ ವಿಳಂಬ ತಡೆಗಟ್ಟಲು ಸಾರಿಗೆ ವೇಳಾಪಟ್ಟಿಗಳನ್ನು ಸರಿಹೊಂದಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಅನ್ವಯಿಸುತ್ತಿರುವ ಭದ್ರತಾ ತಂತ್ರಗಳು
- ಬಸ್ ಮತ್ತು ರೈಲುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಟ್ರ್ಯಾಕರ್ ವ್ಯವಸ್ಥೆ
- ಸಾರಿಗೆ ವ್ಯವಸ್ಥೆ ಸುಗಮಗೊಳಿಸಲು ನಿರ್ವಾಹಕರಿಗೆ ಸೂಚನೆ
- ಹೆದ್ದಾರಿಗಳ ಭದ್ರತಾ ಪಡಿತರ ಹೆಚ್ಚಳ
ಬಲೂಚಿಸ್ತಾನ ಲಿಬರೇಶನ್ ಆರ್ಮಿ (BLA) ಈ ದಾಳಿಗಳ ಪ್ರಮುಖ ಹೊಣೆಯಾಗಿದೆ ಎಂದು ತಿಳಿದು ಬಂದಿದೆ. ಇತ್ತೀಚಿನ ಘಟನೆಯೊಂದರಲ್ಲಿ ಗ್ವಾದರ್ ಕರಾವಳಿ ಹೆದ್ದಾರಿ ಮೇಲೆ ಉಗ್ರರು ಕರಾಚಿಗೆ ಹೊರಟಿದ್ದ ಬಸ್‌ನ ಆರು ಪ್ರಯಾಣಿಕರನ್ನು ಹೊರತೆಗೆಯಿಸಿ ಹತ್ಯೆ ಮಾಡಿದರು.
ಇದೇ ತಿಂಗಳ ಆರಂಭದಲ್ಲಿ ಜಾಫರ್ ಎಕ್ಸ್ಪ್ರೆಸ್ ರೈಲನ್ನು ಹೈಜಾಕ್ ಮಾಡಲಾಗಿದ್ದು, 18 ಭದ್ರತಾ ಸಿಬ್ಬಂದಿಗಳೊಂದಿಗೆ 26 ಜನರು ಸಾವನ್ನಪ್ಪಿದ್ದರು. ರಕ್ಷಣಾ ಕಾರ್ಯಾಚರಣೆಯಲ್ಲೂ ಐದು ಜನ ಭದ್ರತಾ ಸಿಬ್ಬಂದಿ ಪ್ರಾಣ ಬಿಟ್ಟರು.
ಸಮಗ್ರ ಭದ್ರತಾ ಕ್ರಮಗಳು ಜಾರಿಯಲ್ಲಿವೆ ಎಂದು ಬಲೂಚಿಸ್ತಾನ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ತಿಳಿಸಿದ್ದಾರೆ. ಜನವರಿ 1 ರಿಂದ ಈ ಪ್ರಾಂತ್ಯದಲ್ಲಿ 76 ಬಾರಿ ಹೆದ್ದಾರಿಗಳನ್ನು ಮುಚ್ಚಲಾಗಿದೆ ಎಂದು ಅವರು ಮಾಹಿತಿ ನೀಡಿದರು.







