back to top
26.4 C
Bengaluru
Friday, August 1, 2025
HomeEnvironmentTexas ನಲ್ಲಿ ಭೀಕರ ಪ್ರವಾಹ: 120 ಮಂದಿ ಸಾವು, 170ಕ್ಕೂ ಹೆಚ್ಚು ಕಣ್ಮರೆ

Texas ನಲ್ಲಿ ಭೀಕರ ಪ್ರವಾಹ: 120 ಮಂದಿ ಸಾವು, 170ಕ್ಕೂ ಹೆಚ್ಚು ಕಣ್ಮರೆ

- Advertisement -
- Advertisement -

Texas (USA): ಟೆಕ್ಸಾಸ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭಾರೀ ಪ್ರವಾಹದಿಂದಾಗಿ (Texas floods) ಕನಿಷ್ಠ 120 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 170ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ಪ್ರವಾಹಕ್ಕೆ ಸಂಬಂಧಿಸಿದ ಶೋಧ ಕಾರ್ಯಾಚರಣೆ ಈಗ ಆರುವ ದಿನಕ್ಕೆ ಕಾಲಿಟ್ಟಿದೆ.

ಮೂಲ ಭಾಗ ನಾಶ: ಪ್ರವಾಹದಿಂದ ಟೆಕ್ಸಾಸ್‌ನ ಮಧ್ಯಭಾಗ ಬಹಳಷ್ಟು ಹಾನಿಗೊಳಗಾಗಿದ್ದು, ನಾಶವಾದ ಪ್ರದೇಶಗಳ ಚಿತ್ರಗಳು ವೈರಲಾಗಿವೆ. ಗ್ವಾಡಲೂಪ್ ನದಿಯ ನೀರಿನ ಮಟ್ಟ ಅತಿ ಅಪಾಯದ ಮಟ್ಟಕ್ಕೆ ಏರಿ ಪ್ರವಾಹ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತ್ಯಧಿಕ ಹಾನಿಯಾದ ಕೆರ್ ಕೌಂಟಿ

  • ಕೆರ್ ಕೌಂಟಿಯಲ್ಲೇ 150 ಮಂದಿ ಕಣ್ಮರೆ ಆಗಿರುವ ಶಂಕೆ.
  • ಇದುವರೆಗೆ ಇಲ್ಲಿಯೇ 95 ಮಂದಿ ಸಾವನ್ನಪ್ಪಿರುವುದು ದೃಢವಾಗಿದೆ.
  • ಕಳೆದ ಶುಕ್ರವಾರ ಗ್ವಾಡಲೂಪ್ ನದಿಯು 26 ಅಡಿ ಎತ್ತರದಲ್ಲಿ (ಅಂದರೆ ಎರಡು ಅಂತಸ್ತಿನ ಕಟ್ಟಡದಷ್ಟು) ಸುಮಾರು 45 ನಿಮಿಷಗಳವರೆಗೆ ಹರಿದಿದೆ.

ಶೋಧ ಮತ್ತು ರಕ್ಷಣಾ ಕಾರ್ಯ

  • ಸ್ಥಳೀಯ, ರಾಜ್ಯ ಹಾಗೂ ಫೆಡರಲ್ ಅಧಿಕಾರಿಗಳು, ಜೊತೆಗೆ ಸ್ವಯಂಸೇವಕರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
  • “ಪ್ರತಿಯೊಬ್ಬ ನಾಪತ್ತೆಯಾದವನನ್ನು ಹುಡುಕಿದ ಮೇಲೆ ಮಾತ್ರ ಶೋಧ ಕಾರ್ಯ ನಿಲ್ಲುತ್ತೆ,” ಎಂದು ಗವರ್ನರ್ ಗ್ರೆಗ್ ಅಬ್ಬಾಟ್ ತಿಳಿಸಿದ್ದಾರೆ.

ಹವಾಮಾನ ಮುನ್ಸೂಚನೆ ಮತ್ತು ಇತರ ಪ್ರದೇಶಗಳ ಸ್ಥಿತಿ

  • ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಮತ್ತು ಪ್ರವಾಹದ ಎಚ್ಚರಿಕೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದಾರೆ.
  • ಟೇಕ್ಸಾಸ್ ಮಾತ್ರವಲ್ಲದೇ ನ್ಯೂ ಮೆಕ್ಸಿಕೋ ರಾಜ್ಯದಲ್ಲಿಯೂ ಮಂಗಳವಾರ ಪ್ರವಾಹ ಸಂಭವಿಸಿ ಮೂರು ಸಾವುಗಳು ವರದಿಯಾಗಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page