ಚಿಯಾನ್ ವಿಕ್ರಮ್ ನಟನೆಯ (Chiyan Vikram) ತಂಗಲಾನ್ (Thangalaan) ಸಿನಿಮಾ ಸದ್ದಿಲ್ಲದೇ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಥಿಯೇಟರ್ ನಲ್ಲಿ ಚಿತ್ರವನ್ನು ತಪ್ಪಿಸಿದ್ದ ಮತ್ತು ಸಿನಿಮಾಗಾಗಿ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳು ಈಗ ತಮ್ಮ ಮನೆಯಲ್ಲೇ ಚಿತ್ರವನ್ನು ವೀಕ್ಷಿಸಬಹುದು.
ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಅಡಿಯಲ್ಲಿ ಪಾ. ರಂಜಿತ್ ನಿರ್ದೇಶನದ, ಕೆ.ಇ. ಜ್ಞಾನವೇಲ್ ರಾಜಾ ನಿರ್ಮಿಸಿದ ಈ ಸಿನಿಮಾದಲ್ಲಿ ನಾಯಕಿಯರಾಗಿ ಪಾರ್ವತಿ ತಿರುವೋತ್ತು ಮತ್ತು ಮಾಳವಿಕಾ ಮೋಹನನ್ ನಟಿಸಿದ್ದಾರೆ.
ತಂಗಲಾನ್ ಚಿತ್ರವು 17 ವಾರಗಳ ನಂತರ ಒಟಿಟಿಯಲ್ಲಿ ಸ್ಟ್ರೀಮ್ ಆಗಿದೆ. ಇದು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ Netflix ನಲ್ಲಿ ಲಭ್ಯವಿದೆ, ಆದರೆ ಹಿಂದಿ ಆವೃತ್ತಿ ಇನ್ನೂ ಬಿಡುಗಡೆಯಾಗಿಲ್ಲ.
ಈ ಹಿಂದೆ, ಸಿನಿಮಾದ ಒಟಿಟಿ ಬಿಡುಗಡೆಗೆ ತಡೆಯಕ್ಕಾಗಿ ಕೆಲವರು ಮದ್ರಾಸ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಚಿತ್ರದಲ್ಲಿ ಬೌದ್ಧ ಧರ್ಮವನ್ನು ಪವಿತ್ರವಾಗಿ ಹಾಗೂ ವೈಷ್ಣವ ಧರ್ಮವನ್ನು ಹಾಸ್ಯಮಯವಾಗಿ ಚಿತ್ರಿಸಲಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಚಿತ್ರ ₹100 ಕೋಟಿ ಬಜೆಟ್‌ಗಾಗಿ ನಿರ್ಮಿಸಲಾಗಿದೆ ಮತ್ತು ವಿಶ್ವಾದ್ಯಾಂತ 68 ಕೋಟಿ ರೂ. ಗಳಿಕೆಯೊಂದಿಗೆ ಯಶಸ್ವಿಯಾಗಿ ಬಿಡುಗಡೆಯಾಗಿದೆ.
ನಾನು ಅಸಲಿ ಕೆಜಿಎಫ್ ಕಥೆ ಹೇಳುತ್ತೇನೆ ಅಂತಲೇ ತಿಳಿಸಿದ್ದರು. ಆ ಪ್ರಕಾರ ಕೆಜಿಎಫ್ ಚಿನ್ನದ ನೆಲದ ಅಸಲಿ ಕಥೆಯನ್ನ ಹೇಳುತ್ತಿದ್ದಾರೆ. ತಂಗಲಾನ್ ಮೂಲಕವೇ ಇದನ್ನ ತಿಳಿಸೋ ಕೆಲಸ ಮಾಡಿದ್ದಾರೆ. ಜಿ.ವಿ.ಪ್ರಕಾಶ್ ಕುಮಾರ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಎ.ಅಶೋಕ್ ಕುಮಾರ್ ಕ್ಯಾಮರಾವರ್ಕ್ ಮಾಡಿದ್ದಾರೆ.