Search
WhatsApp alerts

Home › Business

1971ರಲ್ಲಿ ಮಾಡಿದ ಆ ತಪ್ಪು ಮತ್ತು ಜಾಗತಿಕ ಹಣಕಾಸು ಬಿಕ್ಕಟ್ಟು

administrator · Published

Robert Kiyosaki

ರಿಚ್ ಡ್ಯಾಡ್ ಪೂರ ಡ್ಯಾಡ್ (Rich Dad Poor Dad) ಪುಸ್ತಕದ ಲೇಖಕ ರಾಬರ್ಟ್ ಕಿಯೋಸಾಕಿ (Robert Kiyosaki) ಜಾಗತಿಕ ಹಣಕಾಸು ಬಿಕ್ಕಟ್ಟು ಬಂದುತ್ತಿದೆ ಎಂದು ಎಚ್ಚರಿಸಿದ್ದಾರೆ. ಈ ಬಿಕ್ಕಟ್ಟಿನಿಂದ ತಪ್ಪಿಸಿಕೊಳ್ಳಲು ಯಾರೂ ಸಹಾಯ ಮಾಡಲ್ಲ, ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದಿದ್ದಾರೆ.

ಹಣಕಾಸು ಬಿಕ್ಕಟ್ಟಿನ ಹಿನ್ನೆಲೆ: 1998ರಲ್ಲಿ ಎಲ್ಟಿಸಿಎಂ ಹೆಡ್ಜ್ ಫಂಡ್ ಕುಸಿದಾಗ ಅಮೆರಿಕದ ಷೇರುಪೇಟೆ ಕೆಳಗೆ ಬಿದ್ದಿತ್ತು. ಆ ಸಮಯದಲ್ಲಿ ಸೆಂಟ್ರಲ್ ಬ್ಯಾಂಕುಗಳು ಷೇರುಪೇಟೆಯನ್ನು ಕಾಪಾಡಿದವು. ಆದರೆ, ಈಗ ಆ ಬ್ಯಾಂಕುಗಳನ್ನೇ ಉಳಿಸಲು ಯಾರಿದ್ದಾರೆ ಎಂಬ ಪ್ರಶ್ನೆ ಇದೆ.

ವಿದ್ಯಾರ್ಥಿ ಸಾಲವು ಹೊಸ ಸಮಸ್ಯೆ: ಅಮೆರಿಕದಲ್ಲಿ 1.6 ಟ್ರಿಲಿಯನ್ ಡಾಲರ್ ವಿದ್ಯಾರ್ಥಿ ಸಾಲ ಇದೆ. ಇದು ಮುಂದಿನ ಹಣಕಾಸು ಬಿಕ್ಕಟ್ಟಿನ ದೊಡ್ಡ ಕಾರಣವಾಗಬಹುದು ಎಂದು ಕಿಯೋಸಾಕಿ ಹೇಳಿದ್ದಾರೆ.

ಹಣದ ಹಿಂದೆ ಹೋಗಬೇಡಿ: ಹಣಕಾಸು ಬಿಕ್ಕಟ್ಟಿನ ಸಮಯದಲ್ಲಿ ನಗದು ಹಣ ಸಹ ನೆರವಾಗುವುದಿಲ್ಲ. ಜನರು ನಿಜವಾದ ಚಿನ್ನ, ಬೆಳ್ಳಿ, ಬಿಟ್‌ಕಾಯಿನ್ ಖರೀದಿಸಿ ತಮ್ಮ ಹಣವನ್ನು ಉಳಿಸಿಕೊಳ್ಳಬೇಕು. ಗೋಲ್ಡ್ ಇಟಿಎಫ್, ಸಿಲ್ವರ್ ಇಟಿಎಫ್ ಹೂಡಿಕೆ ಮಾಡುವುದು ಉತ್ತಮವಲ್ಲ ಎಂದು ಸಲಹೆ ನೀಡಿದ್ದಾರೆ.

1971ರಲ್ಲಿ ಮಾಡಿದ ದೊಡ್ಡ ತಪ್ಪು: 1971ರಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ಡಿಕ್ಸನ್ ಅಮೆರಿಕದ ಡಾಲರ್ ಕರೆನ್ಸಿಯನ್ನು ಗೋಲ್ಡ್ ಸ್ಟ್ಯಾಂಡರ್ಡ್‌ನಿಂದ ಹೊರತರುವ ನಿರ್ಧಾರ ತೆಗೆದುಕೊಂಡರು. ಈ ನಿರ್ಧಾರದಿಂದಲೂ ಜಾಗತಿಕ ಹಣಕಾಸು ಬಿಕ್ಕಟ್ಟು ಮಿತಿಮೀರಿದ ಬಲವಾಗಿ ಬದಲಾಗುತ್ತಿದೆ ಎಂದು ರಾಬರ್ಟ್ ಕಿಯೋಸಾಕಿ ಹೇಳಿದ್ದಾರೆ.

ಹಣದ ಹಿಂದಿನ ಲಾಭಕ್ಕಾಗದೆ ಜಾಗತಿಕ ಬಿಕ್ಕಟ್ಟಿನ ಬಗ್ಗೆ ಎಚ್ಚರಿಕೆ ವಹಿಸಿ, ಹಣವನ್ನು ಜಾಗರೂಕವಾಗಿ ನಿರ್ವಹಿಸಬೇಕು ಎಂದು ಈ ಲೇಖಕರು ಎಚ್ಚರಿಸಿದ್ದಾರೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page