BJP ಯಿಂದ ಎರಡು ಬಾರಿ ಸಂಸದರಾಗಿರುವ ತೇಜಸ್ವಿ ಸೂರ್ಯ (MP Tejasvi Surya) ಅವರು ಮತ್ತೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಗೋವಾದಲ್ಲಿ (Goa) ನಡೆದ Iron Man 70.3 (Ironman70.3) ಟ್ರಯಥ್ಲಾನ್ ರೇಸ್‌ನಲ್ಲಿ (triathlon race) ಸ್ಪರ್ಧಿಸಿ, 8 ಗಂಟೆ 27 ನಿಮಿಷ 32 ಸೆಕೆಂಡ್‌ಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಈ ಸ್ಪರ್ಧೆಯ ಪೂರ್ಣಗೊಳಿಸಿದ ಮೊದಲ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೂ ತೇಜಸ್ವಿ ಸೂರ್ಯ ಪಾತ್ರರಾಗಿದ್ದಾರೆ. ಈ ಸ್ಪರ್ಧೆಯು ಮೂರು ವಿಭಾಗಗಳನ್ನು ಒಳಗೊಂಡಿತ್ತು.
1.9 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21.1 ಕಿ.ಮೀ ಓಟ ಸೇರಿದಂತೆ ಒಟ್ಟು 113 ಕಿ.ಮೀ ದೂರ ಕ್ರಮಿಸುವುದು ಇದರ ಮಾನದಂಡ.
ಗೋವಾದಲ್ಲಿ ನಡೆದ ಈ ಐರನ್ ಮ್ಯಾನ್ 70.3 ಸ್ಪರ್ಧೆಯು ಕ್ರೀಡೆಗೆ ಹೆಚ್ಚು ಪ್ರಸಿದ್ಧವಾಗಿದ್ದು, ಇದರಲ್ಲಿ ಸುಮಾರು 50 ಕ್ಕೂ ಹೆಚ್ಚು ದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.
ಭಾರತ ಮತ್ತು ವಿಶ್ವದ ಕ್ರೀಡಾಪಟುಗಳು, ಫಿಟ್ನೆಸ್ ಪ್ರಿಯರ ಪ್ರಮುಖ ಸ್ಪರ್ಧೆ ಇದು ಎನ್ನಲಾಗಿದೆ.
ತುಂಬಾ ಕಠಿಣವಾದ ಈ ಐರನ್ ಮ್ಯಾನ್ 70.3 ಗೋವಾ ಸ್ಪರ್ಧೆಗಾಗಿ ಕಳೆದ 4 ತಿಂಗಳಿಂದ ನಾನು ಫಿಟ್ನೆಸ್ಗಾಗಿ ಕಷ್ಟಕರವಾದ ತರಬೇತಿ ಪಡೆದಿದ್ದೆ. ಈ ಕಾರಣದಿಂದಲೇ ನಾನು ಈ ಸ್ಪರ್ಧೆಯನ್ನು ಪೂರ್ಣಗೊಳಿಸಿ, ಯಶಸ್ವಿಯಾಗಿದ್ದೇನೆ.
ಇದಕ್ಕೆ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಫಿಟ್ ಇಂಡಿಯಾ ಅಭಿಯಾನವೇ ಸ್ಫೂರ್ತಿ ಎಂದು ತೇಜಸ್ವಿ ಸೂರ್ಯ ಸಂತಸ ಹಂಚಿಕೊಂಡಿದ್ದಾರೆ. ಇಂದು ನಾನು ಈ ಸವಾಲನ್ನು ಪೂರ್ಣಗೊಳಿಸಿದ್ದೇನೆ.
ನನ್ನ ದೀರ್ಘಕಾಲದ ಕನಸನ್ನು ಪೂರ್ಣಗೊಳಿಸಿದೆ ಎಂದು ಹಂಚಿಕೊಳ್ಳಲು ಹರ್ಷವಾಗಿದೆ. ಈ ಗೆಲುವನ್ನು ನಾನು ಪ್ರಧಾನಿಯವರಿಗೆ ವಿನಮ್ರವಾಗಿ ಅರ್ಪಿಸುತ್ತೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ನಮ್ಮ ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳುವ ಮೂಲಕ ಯಾವುದೇ ಉದ್ಯಮದಲ್ಲಿ ಯಶಸ್ಸು ಸಾಧಿಸಬಹುದು. ನಮ್ಮ ದೇಶಕ್ಕೆ ಫಿಟ್‌ನೆಸ್ ಮೂಲಭೂತವಾಗಿ ಅಗತ್ಯವಿದೆ ಎಂದಿದ್ದಾರೆ.
ಮೋದಿ ಶ್ಲಾಘನೆ
ಸಂಸದ ತೇಜಸ್ವಿ ಸೂರ್ಯ ಅವರ ಈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ನಾಯಕರು ಶ್ಲಾಘಿಸಿದ್ದಾರೆ.
ಮೋದಿ ಟ್ವೀಟ್ ಮಾಡುವ ಮೂಲಕ, ಇದು ಯುವಕರಿಗೆ ಫಿಟ್‌ನೆಸ್ ಸಂಬಂಧಿತ ಚಟುವಟಿಕೆಗಳನ್ನು ಮುಂದುವರಿಸಲು ಇನ್ನೂ ಸ್ಫೂರ್ತಿ ನೀಡುತ್ತದೆ. ಈ ಬಗ್ಗೆ ನನಗೆ ನನಗೆ ಖಾತ್ರಿಯಿದೆ ಎಂದು ಬೆನ್ನುತಟ್ಟಿದ್ದಾರೆ.
ಇದಕ್ಕೆ ಉತ್ತರಿಸಿರುವ ತೇಜಸ್ವಿ ಸೂರ್ಯ, ಸರ್. ನಿಮ್ಮ ಫಿಟ್ನೆಸ್ ಹಾಗೂ ಎನರ್ಜಿಯೇ ನಮಗೆಲ್ಲರಿಗೂ ಸ್ಫೂರ್ತಿ ಎಂದಿದ್ದಾರೆ. ಖೇಲೋ ಇಂಡಿಯಾ ಮತ್ತು ಫಿಟ್ ಇಂಡಿಯಾ ಅಭಿಯಾನಗಳು ದೈಹಿಕ ಸಾಮರ್ಥ್ಯಕ್ಕೆ ಆದ್ಯತೆ ನೀಡುತ್ತಿವೆ.
ಇವು ಇಡೀ ದೇಶಕ್ಕೆ ಪ್ರಯೋಜನಕಾರಿಯಾಗಿವೆ. ನಿಮ್ಮ ಈ ದೂರದೃಷ್ಟಿಯ ಯೋಜನೆಗಳನ್ನು ಮುನ್ನಡೆಸಲು ಹಾಗೂ ಯುವಜನರನ್ನು ಫಿಟ್‌ನೆಸ್‌ನತ್ತ ಕರೆತರಲು ನಾನು ಬಯಸುತ್ತಿದ್ದೇನೆ ಎಂದು ತೇಜಸ್ವಿ ಸೂರ್ಯ ಮೋದಿ ಅವರಿಗೆ ತಿಳಿಸಿದ್ದಾರೆ.