ಜುಲೈ ತಿಂಗಳ ಕೊನೆಯಲ್ಲಿ ಆಕಾಶದಲ್ಲಿ ಅಪರೂಪದ ದೃಶ್ಯವೊಂದು ನಡೆಯಲಿದೆ – ನಕ್ಷತ್ರಗಳ ಮಳೆ! (meteor shower) ಹೌದು, ಇದು “ಸೌತ್ ಡೆಲ್ಟಾ ಅಕ್ವೇರಿಡ್ಸ್” ಎಂದು ಕರೆಯಲಾಗುವ ಉಲ್ಕಾಪಾತ. ಈ ಸಮಯದಲ್ಲಿ ನೂರಾರು ಉಲ್ಕೆಗಳು ಭೂಮಿಯ ವಾತಾವರಣಕ್ಕೆ ಬಂದು ಉರಿದು ಬೀಳುತ್ತವೆ. ಈ ಮಳೆಯು ಜುಲೈ 18ರಿಂದ ಆಗಸ್ಟ್ 12ರವರೆಗೆ ನಡೆಯಲಿದೆ. ಆದರೆ, ಜುಲೈ 29 ಮತ್ತು 30ರಂದು ಇದರ ತೀವ್ರತೆ ಗರಿಷ್ಠವಾಗಿರುತ್ತದೆ.
ಈ ನಕ್ಷತ್ರಮಳೆಯ ವೈಶಿಷ್ಟ್ಯವೆಂದರೆ, ಇದನ್ನು ಬರಿಗಣ್ಣಿನಿಂದಲೇ ನೋಡಬಹುದು – ದೂರದರ್ಶಕ ಅಥವಾ ವಿಶೇಷ ಸಾಧನಗಳ ಅಗತ್ಯವಿಲ್ಲ. ಆದರೆ ಚಂದ್ರನ ಬೆಳಕು ಕಡಿಮೆ ಇರಬೇಕು ಮತ್ತು ಹವಾಮಾನ ಸ್ಪಷ್ಟವಾಗಿರಬೇಕು.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಭಯ್ ಪ್ರತಾಪ್ ಸಿಂಗ್ ಅವರ ಪ್ರಕಾರ, ಪ್ರತಿ ರಾತ್ರಿ ಸರಾಸರಿ 25 ಉಲ್ಕಾಪಾತಗಳು ಸಂಭವಿಸುತ್ತವೆ. ಜುಲೈ 29-30ರಂದು ಈ ಸಂಖ್ಯೆ ಗಂಟೆಗೆ 100ಕ್ಕೂ ಮೀರುತ್ತದೆ. ಈ ಉಲ್ಕಾಪಾತಗಳು “ಪರ್ಸೀಡ್”, “ಅಕ್ವೇರಿಡ್ಸ್” ಹಾಗೂ “ಆಲ್ಫಾ ಕ್ಯಾಪ್ರಿಕೋರ್ಣಿಡ್ಸ್” ಎಂಬ ಹೆಸರುಗಳಿಂದ ಪರಿಚಿತವಾಗಿವೆ.
ಭಾರತ, ಅಮೆರಿಕ ಮತ್ತು ಯುರೋಪ್‌ನಂತಹ ದೇಶಗಳಲ್ಲಿ ಈ ಉಲ್ಕಾಪಾತ ಸ್ಪಷ್ಟವಾಗಿ ಗೋಚರವಾಗುತ್ತದೆ. ಬೆಳಗಿನ 3 ಗಂಟೆಯೊಳಗೆ ಅಥವಾ ಸಂಜೆ 7-8ರ ನಡುವೆ ನೋಡಿದರೆ ಉತ್ತಮ. ವೇಗವು ಸೆಕೆಂಡಿಗೆ 40 ಕಿಲೋಮೀಟರ್ ಆಗಿರುತ್ತದೆ.
ಹೈ ಶಾಟ್ ಕ್ಯಾಮೆರಾ ಬಳಸಿದರೆ ಈ ನಕ್ಷತ್ರ ಮಳೆಯ ಭಾವಚಿತ್ರಗಳನ್ನು ಸೆರೆಹಿಡಿಯಬಹುದು. ಇದರ ಉಗಮ ಪ್ರದೇಶ ‘ಕುಂಭ ರಾಶಿ ನಕ್ಷತ್ರ ಪುಂಜ’ದ ದಿಕ್ಕಿನಲ್ಲಿ ಕಂಡುಬರುತ್ತದೆ.
ಇದು ಕುಟುಂಬದೊಂದಿಗೆ ಆಕಾಶವೀಕ್ಷಣೆಗೆ ಅದ್ಭುತ ಅವಕಾಶ. ನಿಸರ್ಗದ ಈ ವಿಸ್ಮಯವನ್ನು ತಪ್ಪದೆ ಕಣ್ಣುಗಳು ದೊರೆವಷ್ಟರ ಮಟ್ಟಿಗೆ ಅನುಭವಿಸಿ!