Imphal: ಮಣಿಪುರದಲ್ಲಿ (Manipur) ಪೊಲೀಸ್ ಇಲಾಖೆ ಎರಡು ನಿಷೇಧಿತ ಗುಂಪುಗಳಿಗೆ ಸೇರಿದ ಮೂವರನ್ನು ಬಂಧಿಸಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಚೋಂಗ್ಥಮ್ ಶ್ಯಾಮಚಂದ್ರ ಸಿಂಗ್ (23), ಇಂಫಾಲ್ ಮೈಬಮ್ ಸೂರಜ್ ಖಾನ್ (32) ಮತ್ತು ಬೋಗಿಮಯುಮ್ ಸಾಹಿದ್ ಖಾನ್ (30) ಬಂಧಿತರು.
ಇವರಿಂದ 5.56 ಎಂಎಂ AINS ಲೈವ್ ಕಾರ್ಟ್ರಿಡ್ಜ್‌ಗಳು, 32 ಮದ್ದುಗುಂಡುಗಳು ಮತ್ತು ಮೂರು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ವ್ಯಕ್ತಿಗಳು ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಹಾಗೂ ಜನರನ್ನು ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರು ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿ (Kanglepak Communist Party) (ಪೀಪಲ್ಸ್ ವಾರ್ ಗ್ರೂಪ್) ಸಂಘಟನೆಯ ಸದಸ್ಯರಾಗಿದ್ದರು.
ಹೀಗೇ ಮತ್ತೊಂದು ಘಟನೆಯಲ್ಲಿ, ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (United National Liberation Front) (ನಿಂಗೋನ್ ಮಚಾ ಗುಂಪು)ಗೆ ಸೇರಿದ ಉಗ್ರನೊಬ್ಬನನ್ನು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಗುರುವಾರ ಬಂಧಿಸಲಾಗಿದೆ. ಲಿಲಾಂಗ್ ಹೌರೂ ಸಂಗೊಂಶುಂಫಮ್ ವಾರಿಶ್ (25) ಎಂಬ ಈ ವ್ಯಕ್ತಿಯಿಂದ 32 ಪಿಸ್ತೂಲ್ ಮತ್ತು ಮದ್ದುಗುಂಡುಗಳು ವಶಕ್ಕೆ ಪಡೆಯಲಾಗಿದೆ.
ಭದ್ರತಾ ಪಡೆ ಗುರುವಾರ ಕಾಂಗ್ಪೊಕ್ಪಿ ಜಿಲ್ಲೆ ಎಸ್ ಮೊಂಗ್ಪಿ ಪರ್ವತದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲು ಕಾರ್ಯಾಚರಣೆ ನಡೆಸಿದ್ದು, 303 ರೈಫಲ್, 9 ಎಂಎಂ ಪಿಸ್ತೂಲ್, ಎರಡು ಎಸ್ಬಿಬಿಎಲ್ ಗನ್‌ಗಳು, 5.56 MM INSS LMG ಮ್ಯಾಗಜೀನ್, ಎರಡು ಹ್ಯಾಂಡ್ ಗ್ರೆನೇಡ್ ಗಳು, (grenades) ಎರಡು ಡಿಟೋನೇಟರ್ಗಳು, (detonators) 16 ಕಾಟ್ರಿಡ್ಜ್‌ಗಳು ಮತ್ತು ಮೂರು ಟಿಯರ್ ಸೋಕ್ ಗ್ರೆನೇಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.