Search
WhatsApp alerts

Home › News

ಇಂದು World Wide Web (WWW) Day: ಇದನ್ನು ಯಾರು ಕಂಡುಹಿಡಿದರು? ಏಕೆ ಮಹತ್ವವುಂಟು?

administrator · Published

World Wide Web

ಪ್ರತಿ ವರ್ಷ ಆಗಸ್ಟ್ 1 ರಂದು ವರ್ಲ್ಡ್ ವೈಡ್ ವೆಬ್ (World Wide Web) ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಮೂಲಕ, ಇಂಟರ್ನೆಟ್‍ನ ಮೂಲಕ ಜಗತ್ತಿನಾದ್ಯಂತ ಮಾಹಿತಿ ಹಂಚಿಕೊಳ್ಳುವ ವ್ಯವಸ್ಥೆಯಾದ ವೆರ್ಲ್ಡ್ ವೈಡ್ ವೆಬ್ನ ಮಹತ್ವವನ್ನು ನೆನಪಿಸಿಕೊಳ್ಳಲಾಗುತ್ತದೆ.

ವರ್ಲ್ಡ್ ವೈಡ್ ವೆಬ್ ಅಂದರೆ ಏನು?: ಡಬ್ಲ್ಯೂಡಬ್ಲ್ಯೂಡಬ್ಲ್ಯೂ (WWW) ಎಂದರೆ ಇಂಟರ್ನೆಟ್‍ನಲ್ಲಿರುವ ಅನೇಕ ವೆಬ್ ಪುಟಗಳ (web pages) ಸಂಗ್ರಹ. ಈ ಪುಟಗಳನ್ನು ನಾವು ನಮ್ಮ ಬ್ರೌಸರ್ ಮೂಲಕ ವೀಕ್ಷಿಸುತ್ತೇವೆ. ಈ ಎಲ್ಲಾ ಪುಟಗಳು ಪರಸ್ಪರ ಲಿಂಕ್ ಆಗಿರುತ್ತವೆ. ಉದಾಹರಣೆಗೆ, ನೀವು www.google.com ಅಂತಾ ಟೈಪ್ ಮಾಡಿದರೆ ಒಂದು ಪುಟ ತೆರೆದು ಬರುತ್ತದೆ. ಇಂಥ ಎಲ್ಲಾ ಜಾಲತಾಣಗಳ ಗುಂಪಿಗೆ “ವೆಬ್” ಎನ್ನುತ್ತೇವೆ.

ಟಿಮ್ ಬರ್ನರ್ಸ್-ಲೀ ಎಂಬ ಬ್ರಿಟಿಷ್ ವಿಜ್ಞಾನಿ 1989ರಲ್ಲಿ ಸ್ವಿಟ್ಜರ್ಲೆಂಡ್‌ನ CERN ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಈ ವ್ಯವಸ್ಥೆಯನ್ನು ರಚಿಸಿದರು. ಅವರು ಪ್ರಾರಂಭದಲ್ಲಿ ಸಂಸ್ಥೆಗಳಲ್ಲಿ ಮಾಹಿತಿ ಹಂಚಿಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಶ್ರುಷ್ಟಿಸಿದರು. ಅವರು HTTP, HTML, URL ಇತ್ಯಾದಿಗಳನ್ನು ಕೂಡಾ ಅಭಿವೃದ್ಧಿಪಡಿಸಿದರು.

ಮೊದಲ ವೆಬ್‌ಸೈಟ್ ಅನ್ನು ಕೂಡಾ ಟಿಮ್ ಬರ್ನರ್ಸ್-ಲೀ ಅವರೇ ನಿರ್ಮಿಸಿದರು. ಅವರು 1992ರಲ್ಲಿ ಮೊದಲ ಬಾರಿಗೆ ಇಂಟರ್ನೆಟ್‌ಗೆ ಒಂದು ಚಿತ್ರವನ್ನು ಅಪ್ಲೋಡ್ ಮಾಡಿದರು – ಅದು CERN ನಲ್ಲಿದ್ದವರ ಪಾಪ್ ಬ್ಯಾಂಡ್ ಫೋಟೋ.

ಇಂಟರ್ನೆಟ್ ಮತ್ತು WWW ಎರಡೂ ಒಂದೇನಾ?

  • ಇಂಟರ್ನೆಟ್ ಅಂದರೆ ಕಂಪ್ಯೂಟರ್‌ಗಳ ಜಾಲ – ಒಂದು ಕಂಪ್ಯೂಟರ್ ಇನ್ನುೊಂದನ್ನು ಸಂಪರ್ಕಿಸುವ ಮೂಲ ವ್ಯವಸ್ಥೆ.
  • ವೆಬ್ (WWW) ಅಂದರೆ ಆ ಜಾಲದ ಮೇಲೆ ಕಾರ್ಯನಿರ್ವಹಿಸುವ ವೆಬ್‌ಸೈಟ್‌ಗಳ ಗುಂಪು.
  • ಒಂದು ಉದಾಹರಣೆಗೆ, ಇಂಟರ್ನೆಟ್ ರಸ್ತೆಯಂತಿದ್ದು, ವೆಬ್‌ಸೈಟ್‌ಗಳು ಆ ರಸ್ತೆಯಲ್ಲಿ ಚಲಿಸುವ ವಾಹನಗಳಂತಿವೆ.

ಈ ದಿನದ ಮಹತ್ವ ಏನು

  • ವೆಬ್‌ನಿಂದ ನಾವು ಮಾಹಿತಿಯನ್ನು ಸುಲಭವಾಗಿ ಹುಡುಕಬಹುದು, ಹಂಚಿಕೊಳ್ಳಬಹುದು.
  • ಶಾಲಾ ಕೆಲಸ, ಆನ್‌ಲೈನ್ ಖರೀದಿ, ಬ್ಯಾಂಕಿಂಗ್, ಈ ಎಲ್ಲಾ ಕಾರ್ಯಗಳಿಗೆ ವೆಬ್ ಸಹಾಯ ಮಾಡುತ್ತಿದೆ.
  • WWWಕಂಡುಹಿಡಿದವರನ್ನು ಗೌರವಿಸಲು ಹಾಗೂ ಈ ಮಹತ್ವದ ಸಾಧನೆಗೆ ನಮನ ಸಲ್ಲಿಸಲು ಈ ದಿನವನ್ನು ಆಚರಿಸುತ್ತೇವೆ.

WWW ನಮಗೆ ಇಂಟರ್ನೆಟ್ ಮೂಲಕ ಜಗತ್ತನ್ನು ತಲುಪಿಸುವ ದಾರಿ. ಇದರ ಪ್ರಾರಂಭ ಟಿಮ್ ಬರ್ನರ್ಸ್-ಲೀ ಅವರಿಂದ 1989ರಲ್ಲಿ ಆಗಿದ್ದು, ಇಂದು ನಾವು ಬಳಸುತ್ತಿರುವ ಲಕ್ಷಾಂತರ ವೆಬ್‌ಸೈಟ್‌ಗಳಿಗೆ ಈತನೇ ಮೂಲ. ಇಂದಿನ ದಿನ, ಈ “ವೆಬ್”ನಿಂದ ನಾವೆಲ್ಲರೂ ಹೇಗೆ ಸಂಪರ್ಕಿತರಾಗಿದ್ದೇವೆ ಎಂಬುದನ್ನು ಸ್ಮರಿಸಲು ಒಂದು ಸುವರ್ಣ ಅವಕಾಶ!

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page