back to top
25.9 C
Bengaluru
Wednesday, September 17, 2025
HomeAutoToyotaಹೊಸ SUV ಬಿಡುಗಡೆಗೆ ಸಜ್ಜು: ಇಂಟೀರಿಯರ್ ವಿವರಗಳು ಬಹಿರಂಗ!

Toyotaಹೊಸ SUV ಬಿಡುಗಡೆಗೆ ಸಜ್ಜು: ಇಂಟೀರಿಯರ್ ವಿವರಗಳು ಬಹಿರಂಗ!

- Advertisement -
- Advertisement -

ಟೊಯೋಟಾ (Toyota) ಮತ್ತು ಮಾರುತಿ ಸುಜುಕಿ (Maruti Suzuki) ಪಾಲುದಾರಿಕೆಯಲ್ಲಿ ಕೆಲವು ಕಾರುಗಳ ಮಾದರಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿವೆ. ಈಗ, ಈ ಬ್ರಾಂಡ್ ಗಳು ಭಾರತೀಯ ಎಲೆಕ್ಟ್ರಿಕ್ ವಾಹನ (EV) ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗಿವೆ. ಜನವರಿಯಲ್ಲಿ ನಡೆದ ಆಟೋ ಎಕ್ಸ್ಪೋ 2025 ರಲ್ಲಿ ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ SUV ಇ-ವಿಟಾರಾ ಅನ್ನು ಅನಾವರಣಗೊಳಿಸಿತು. ಈ ವರ್ಷದ ಕೊನೆಯ ವೇಳೆಗೆ ಈ ಕಾರು ಲಾಂಚ್ ಆಗುವ ನಿರೀಕ್ಷೆಯಿದೆ. ಅದೇ ಮಾದರಿಯ ಟೊಯೋಟಾ ಆವೃತ್ತಿಯೂ ಬರುವ ಸಾಧ್ಯತೆಯಿದೆ.

ಈ ಟೊಯೋಟಾ ಎಲೆಕ್ಟ್ರಿಕ್ ಎಸ್ಯುವಿಯ ಮಾಹಿತಿ ಇತ್ತೀಚೆಗೆ ಬಹಿರಂಗವಾಗಿದೆ. ಟೊಯೋಟಾ ಇದನ್ನು ಅರ್ಬನ್ ಕ್ರೂಸರ್ ಇವಿ ಎಂದು ಕರೆಯಲಿದೆ. ಮೂಲಗಳ ಪ್ರಕಾರ, ಮಾರುತಿ ಮತ್ತು ಟೊಯೋಟಾ ಎಲೆಕ್ಟ್ರಿಕ್ ಕಾರುಗಳನ್ನು ಗುಜರಾತ್‌ನ ಸುಜುಕಿ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ.

ಎಕ್ಸ್‌ಟೀರಿಯರ್ ಹೈಲೈಟ್ಸ್

  • ಸ್ಮೂತ್ headlamps ಮತ್ತು ಡ್ಯುಯಲ್-ಫಂಕ್ಷನ್ LED DRL‌ಗಳು.
  • ಚಾರ್ಜಿಂಗ್ ಪೋರ್ಟ್ ಫೆಂಡರ್‌ನಲ್ಲಿ ಲಭ್ಯ.
  • 19-ಇಂಚಿನ ಅಲಾಯ್ ವೀಲ್ಸ್ ಮತ್ತು ದಪ್ಪ ಕ್ಲಾಡಿಂಗ್, ಇದು ಕಾರಿನ ಸ್ಪೋಟ್ರಿ ಲುಕ್ ಅನ್ನು ಹೆಚ್ಚಿಸುತ್ತದೆ.
  • ಹಿಂಭಾಗದಲ್ಲಿ LED ಟೈಲ್ ಲೈಟ್ಸ್, ಟೊಯೋಟಾ ಬ್ಯಾಡ್ಜಿಂಗ್ ಮತ್ತು AWD (ಅಲ್-ವೀಲ್ ಡ್ರೈವ್) ಬ್ಯಾಡ್ಜ್ ಇದೆ.

ಇಂಟೀರಿಯರ್ ವಿಶೇಷತೆಗಳು

  • ಉದ್ದವಾದ AC ವೆಂಟ್‌ಗಳೊಂದಿಗೆ ಲೇಯರ್ಡ್ ಡ್ಯಾಶ್‌ಬೋರ್ಡ್
  • 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ instrument cluster
  • ಎಲೆಕ್ಟ್ರಿಕ್‌ ಅಡ್ಜಸ್ಟ್‌ಮೆಂಟ್ ಇರುವ ಡ್ರೈವರ್ ಸೀಟ್
  • ಹಿಂಭಾಗದ ಸೀಟುಗಳು ಹೆಚ್ಚು ಸ್ಥಳಾವಕಾಶಕ್ಕಾಗಿ ಮುಂದಕ್ಕೆ-ಹಿಂದಕ್ಕೆ ಸರಿಯಬಹುದಾದ ವ್ಯವಸ್ಥೆ
  • ಆಂಬಿಯೆಂಟ್ ಲೈಟಿಂಗ್, JBL ಸ್ಪೀಕರ್, ಲೆವೆಲ್ 2 ADAS (ಆಡ್ವಾನ್ಸ್‌ಡ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಮ್) ಮತ್ತು ಇನ್ನೂ ಹಲವಾರು ಫೀಚರ್‌ಗಳು.

ಟೊಯೋಟಾ ಈ ಎಲೆಕ್ಟ್ರಿಕ್ ಕಾರನ್ನು ಮುಂಬರುವ ತಿಂಗಳಲ್ಲಿ ಅಧಿಕೃತವಾಗಿ ಅನಾವರಣಗೊಳಿಸುವ ಸಾಧ್ಯತೆಯಿದೆ

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page