back to top
26.6 C
Bengaluru
Tuesday, September 16, 2025
HomeIndiaPunjab ನ ಮಜಿತಾದಲ್ಲಿ ದುರಂತ - Poisoned Alcohol ಸೇವಿಸಿ 14 ಜನರ ಸಾವು

Punjab ನ ಮಜಿತಾದಲ್ಲಿ ದುರಂತ – Poisoned Alcohol ಸೇವಿಸಿ 14 ಜನರ ಸಾವು

- Advertisement -
- Advertisement -

Amritsar (Punjab): ಪಂಜಾಬ್‌ನ ಮಜಿತಾ ಕ್ಷೇತ್ರದಲ್ಲಿ ವಿಷಪೂರಿತ ಮದ್ಯ (alcohol) ಸೇವನೆಯಿಂದ 14ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಮಜಿತಾದ ಮೂರು ಹಳ್ಳಿಗಳಾದ ಥಾರ್ಯೇವಾಲ್, ಮರಾರಿ ಮತ್ತು ಭಂಗಲಿ ಗ್ರಾಮಗಳಲ್ಲಿ ಈ ಘಟನೆ ನಡೆದಿದೆ.

ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ಕೆಲವರು ಮದ್ಯ ಸೇವಿಸಿದ ನಂತರ ತೀವ್ರ ಅಸ್ವಸ್ಥರಾಗಿದ್ದು, ತಕ್ಷಣವೇ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಗ್ರಾಮಸ್ಥರ ಪ್ರಕಾರ, ಇದುವರೆಗೆ 14 ಜನರು ಸಾವನ್ನಪ್ಪಿದ್ದಾರೆ. ಹಲವರು ಚೇತರಿಸಿಕೊಳ್ಳದ ಸ್ಥಿತಿಯಲ್ಲಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪ್ರಕರಣ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಪೊಲೀಸರು ಹಾಗೂ ಜಿಲ್ಲಾಧಿಕಾರಿ ಸಾಕ್ಷಿ ಸಾಹ್ನಿ ಭೇಟಿ ನೀಡಿದ್ದಾರೆ.

ಪೊಲೀಸರು ಈ ಸಂಬಂಧ ಐವರನ್ನು ಬಂಧಿಸಿದ್ದಾರೆ. ಅವರಲ್ಲಿ ಪ್ರಮುಖ ಆರೋಪಿ ಪ್ರಭ್ಜಿತ್ ಸಿಂಗ್ ಸೇರಿದಂತೆ, ಮದ್ಯ ತಯಾರಿಕೆ ಬಳಸಿದ ಯಂತ್ರೋಪಕರಣಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಷನ್ 105 ಬಿಎನ್ಎಸ್ ಮತ್ತು 61ಎ ಅಡಿಯಲ್ಲಿ ಕ್ರಮ ಜರುಗಿಸಲಾಗಿದೆ.

ಬಂಧಿತರು

  • ಪ್ರಭ್ಜಿತ್ ಸಿಂಗ್ (ಪ್ರಮುಖ ಆರೋಪಿ)
  • ಕುಲ್ಬೀರ್ ಸಿಂಗ್ ಅಲಿಯಾಸ್ ಜಗ್ಗು
  • ಸಾಹಿಬ್ ಸಿಂಗ್ ಅಲಿಯಾಸ್ ಸರೈ
  • ಗುರ್ಜಂತ್ ಸಿಂಗ್
  • ನಿಂದರ್ ಕೌರ್

ಪೊಲೀಸರು ತನಿಖೆ ಮುಂದುವರೆಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page