back to top
20.2 C
Bengaluru
Monday, July 21, 2025
HomeIndiaಆಸ್ಪತ್ರೆಗೆ ಸಾಗಿಸುವಾಗ Tragic Jam ನಲ್ಲಿ ಸಿಲುಕಿದ ಮಗುವಿನ ಸಾವಿನ ದಾರುಣ ಘಟನೆ

ಆಸ್ಪತ್ರೆಗೆ ಸಾಗಿಸುವಾಗ Tragic Jam ನಲ್ಲಿ ಸಿಲುಕಿದ ಮಗುವಿನ ಸಾವಿನ ದಾರುಣ ಘಟನೆ

- Advertisement -
- Advertisement -

Gopalganj (Bihar): ಆಸ್ಪತ್ರೆಗೆ ಸಾಗಿಸುವಾಗ ಟ್ರಾಫಿಕ್ ಜಾಮ್ ನಲ್ಲಿ (Tragic Jam) ಸಿಲುಕಿದ ಪರಿಣಾಮ, ಎರಡು ವರ್ಷದ ಮಗು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ದುರ್ಘಟನೆ ಬಿಹಾರದ ಗೋಪಾಲಗಂಜ್‌ನಲ್ಲಿ ನಡೆದಿದೆ.

ಮಗು ತೀವ್ರ ಜ್ವರದಿಂದ ಬಳಲುತ್ತಿತ್ತು. ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ತಂದೆ ಬೈಕ್‌ನಲ್ಲಿ ಮಗುವನ್ನು ಸದರ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಆಸ್ಪತ್ರೆಯ ಬಾಗಿಲಿಗೇರುವ ಹೊತ್ತಿನಲ್ಲಿ ಟ್ರಾಫಿಕ್ ಜಾಮ್ ನಿಂದ  ತಡವಾಯಿತು. ಎಮರ್ಜೆನ್ಸಿ ರೂಮ್‌ಗೇ ತಲುಪುವಷ್ಟರಲ್ಲಿ ಮಗು ಮೃತಪಟ್ಟಿತು.

ಬೆಲ್ವಾ ಗ್ರಾಮದ ವಿಜಯ್ ಮಹಾತೋ ಅವರ ಮಗು ಇದಾಗಿದ್ದು, ಪ್ರಾಥಮಿಕವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಸದರ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಲಾಗಿತ್ತು. ಆದರೆ ಆಸ್ಪತ್ರೆ ಮುಂಭಾಗದಲ್ಲಿ ಅನೇಕ ವಾಹನಗಳನ್ನು ಅಡ್ಡವಾಗಿ ನಿಲ್ಲಿಸಿದ್ದರಿಂದ ದಟ್ಟಣೆ ಉಂಟಾಗಿ ವಿಳಂಬವಾಯಿತು.

ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, “ಟ್ರಾಫಿಕ್ ಜಾಮ್ ಇಲ್ಲದಿದ್ದರೆ ನನ್ನ ಮಗು ಬದುಕುತಿತ್ತು” ಎಂದು ಹೇಳಿದರು.

ಇದು ಕೇವಲ ವಿಜಯ್ ಮಹಾತೋ ಅವರಷ್ಟೇ ಅಲ್ಲ, ಅನೇಕ ಆಂಬ್ಯುಲೆನ್ಸ್‌ಗಳು ಇಂತಹ ದಟ್ಟಣೆಯಲ್ಲಿ ಸಿಲುಕಿ ಬಾಧೆ ಅನುಭವಿಸುತ್ತಿವೆ ಎಂಬುದು ಸಾರ್ವಜನಿಕರ ಅಳಲು.

ಮಕ್ಕಳ ತುರ್ತು ಚಿಕಿತ್ಸೆಯಲ್ಲಿ ಒಂದೊಂದು ಕ್ಷಣ ಮಹತ್ವದ್ದಾಗಿದೆ. ತಡವಾದರೆ ಜೀವಕ್ಕೆ ಅಪಾಯವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ಕುರಿತು ಆಸ್ಪತ್ರೆಯ ವ್ಯವಸ್ಥಾಪಕ ಜಾನ್ ಮೊಹಮ್ಮದ್ ಪೊಲೀಸರಿಗೆ ಮಾಹಿತಿ ನೀಡಿ, ದಟ್ಟಣೆ ನಿಯಂತ್ರಣಕ್ಕಾಗಿ ಟ್ರಾಫಿಕ್ ಡಿಎಸ್ಪಿಗೆ ಮನವಿ ಮಾಡಿದ್ದಾರೆ.

ಅಂಗಡಿಗಳ ಪಕ್ಕ ಹಾಗೂ ಗೇಟ್ ಬಳಿ ಅಡ್ಡ ನಿಲ್ಲಿಸಿರುವ ವಾಹನಗಳೇ ಈ ಸಮಸ್ಯೆಗೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಪಾರ್ಕಿಂಗ್ ನಿಯಮ ಜಾರಿಗೆ ಸೂಚನೆ ನೀಡಲಾಗಿದೆ ಎಂದು ಟ್ರಾಫಿಕ್ ಡಿಎಸ್ಪಿ ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page