New Delhi: ಆಗಸ್ಟ್ 14 ಅನ್ನು ಭಾರತ ವಿಭಜನೆಯ ಭಯಾನಕ ಸ್ಮರಣಾರ್ಥ ದಿನವಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Modi) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ದೇಶದ ಏಕತೆ ಮತ್ತು ಸಾಮರಸ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.
ಮೋದಿ ಅವರು, ವಿಭಜನೆ ವೇಳೆ ಲಕ್ಷಾಂತರ ಜನರು ಮನೆ, ಆಸ್ತಿ, ಜೀವನ ಎಲ್ಲವನ್ನೂ ಕಳೆದುಕೊಂಡು ಅನುಭವಿಸಿದ ನೋವು ಭಾರತದ ಇತಿಹಾಸದ ದುರಂತ ಅಧ್ಯಾಯ ಎಂದು ಹೇಳಿದ್ದಾರೆ. ಈ ದಿನವು, ಆ ಕಾಲದ ಜನರ ಹೋರಾಟ ಮತ್ತು ತಾಳ್ಮೆಯನ್ನು ಗೌರವಿಸುವ ದಿನವಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಸಂತಾಪ ಸೂಚಿಸಿ, ಕಾಂಗ್ರೆಸ್ ಭಾರತವನ್ನು ತುಂಡು ತುಂಡಾಗಿ ವಿಭಜಿಸಿ ದೇಶಕ್ಕೆ ನೋವುಂಟುಮಾಡಿತು ಎಂದು ಟೀಕಿಸಿದರು. ವಿಭಜನೆಯ ಬಲಿಯಾಗಿದವರಿಗೆ ಹೃತ್ಪೂರ್ವಕ ಗೌರವ ಅರ್ಪಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರು, ವಿಭಜನೆಯ ನೆನಪನ್ನು ಉಳಿಸಿಕೊಂಡು ರಾಷ್ಟ್ರ ನಿರ್ಮಾಣದತ್ತ ಹೆಜ್ಜೆ ಇಡುವುದು ಮುಖ್ಯವೆಂದರು.