back to top
21.7 C
Bengaluru
Tuesday, June 3, 2025
HomeAutoTriumph Scrambler 400 XC ಭಾರತದಲ್ಲಿ ಲಾಂಚ್

Triumph Scrambler 400 XC ಭಾರತದಲ್ಲಿ ಲಾಂಚ್

- Advertisement -
- Advertisement -


ಬ್ರಿಟಿಷ್ ಮೋಟಾರ್ ಸೈಕಲ್ ತಯಾರಕ ಟ್ರಯಂಫ್ ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಬೈಕ್, Scrambler 400 XC, ಬಿಡುಗಡೆ ಮಾಡಿದೆ. ಈ ಮಾದರಿ ಟ್ರಯಂಫ್‌ನ ಮುನ್ನಡೆ ಹೊಂದಿರುವ ಸ್ಪೀಡ್ 400 ಮತ್ತು Scrambler 400X ನೊಂದಿಗೆ ಉತ್ತಮ ಮಾರಾಟ ಸಾಧಿಸಿದೆ.

ಬೆಲೆ ಮತ್ತು ಲಭ್ಯತೆ: ಟ್ರಯಂಫ್ Scramble r400 XC 2.94 ಲಕ್ಷ ರೂ. ಎಕ್ಸ್-ಶೋ ರೂಂ ಬೆಲೆಯಲ್ಲಿ ಲಭ್ಯವಿದೆ. 400X ಮಾದರಿಗಿಂತ 27,000 ರೂ. ಹೆಚ್ಚಾಗಿದ್ದು, ಈ ಹೊಸ ಬೈಕ್ ವಿಭಿನ್ನ, ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ.

ಡಿಸೈನ್ ಮತ್ತು ವೈಶಿಷ್ಟ್ಯಗಳು: Scrambler 400 XC ತನ್ನ ನಯವಾದ ಸ್ಟೈಲಿಂಗ್ ಮತ್ತು ಬ್ರಿಟಿಷ್ ಪ್ರೀಮಿಯಂ ಫಿಟ್ & ಫಿನಿಷಿಂಗ್‌ನಿಂದ ಗಮನ ಸೆಳೆಯುತ್ತದೆ. ಇದು ಆಫ್-ರೋಡ್ ಪ್ರಯಾಣಗಳಿಗೆ ಸೂಕ್ತವಾಗಿದ್ದರೂ, ನಗರ ರಸ್ತೆಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತದೆ. 19 ಇಂಚಿನ ಫ್ರಂಟ್ ಮತ್ತು 17 ಇಂಚಿನ ರಿಯರ್ ವೀಲ್ಸ್, ಮತ್ತು ವಿಶೇಷವಾದ ಫೋರ್ಕ್ ಮತ್ತು ಸಸ್ಪೆನ್ಷನ್ ಟ್ರಾವೆಲ್ ಇದನ್ನು ಇನ್ನಷ್ಟು ವಿಶೇಷಗೊಳಿಸುತ್ತವೆ.

ಎಂಜಿನ್ ಮತ್ತು ಪವರ್: ಎಂಜಿನ್ 398cc ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಇಂಜಿನ್ ಆಗಿದ್ದು, 40 BHP ಪವರ್ ಮತ್ತು 37.5 Nm ಟಾರ್ಕ್ ಉತ್ಪತ್ತಿ ಮಾಡುತ್ತದೆ. 6-ಸ್ಪೀಡ್ gearbox ಜೋಡಣೆಯೊಂದಿಗೆ, ಇದು ಸಮತೋಲನದ ಚಾಲನೆಗಾಗಿ ವಿನ್ಯಾಸಗೊಳಿಸಲಾಗಿದೆ.

ಟೈರ್ ಮತ್ತು ಸಿಸ್ಟಮ್ಸ್: ಟ್ರಯಂಫ್ ಸ್ಕ್ರ್ಯಾಂಬ್ಲರ್ 400 XC ಸ್ವಿಚ್ಬಲ್ ಟ್ರಾಕ್ಷನ್ ಕಂಟ್ರೋಲ್, ರೈಡ್-ಬೈ-ವೈರ್ ಥ್ರೊಟಲ್, ಟಾರ್ಕ್-ಅಸಿಸ್ಟ್ ಕ್ಲಚ್, ಮತ್ತು ಸ್ವತಂತ್ರ ABS ಸಿಸ್ಟಮ್ ನಂತಹ ಹೊಸ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಬಣ್ಣಗಳ ಆಯ್ಕೆ: ಇದು ಮೂರು ಬಣ್ಣಗಳಲ್ಲಿ ಲಭ್ಯವಿದೆ: ರೇಸಿಂಗ್ ಯೆಲ್ಲೋ, ಸ್ಟಾರ್ಮ್ ಗ್ರೇ, ಮತ್ತು ವೆನಿಲ್ಲಾ ವೈಟ್.

ಹೆಚ್ಚುವರಿ ವೈಶಿಷ್ಟ್ಯಗಳು: Scrambler400 XC ನಲ್ಲಿ USB ಚಾರ್ಜಿಂಗ್ ಪೋರ್ಟ್, ಸಿಗ್ನೇಚರ್ DRL‌ಗಳು ಮತ್ತು ಪೂರ್ಣ LED ಲೈಟಿಂಗ್ ಸಿಸ್ಟಮ್ನಂತಹ ಆಧುನಿಕ ವೈಶಿಷ್ಟ್ಯಗಳಿವೆ, ಇದರಿಂದಾಗಿ ಸವಾರಿ ಅನುಭವ ಹೆಚ್ಚು ಸುಧಾರಿತವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page