ಪ್ರಯಾಗ್ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ (Mahakumbh Mela) ಸಂದರ್ಭದಲ್ಲಿ ಗಂಗಾ ನದಿ ಕಲುಷಿತವಾಗಿದೆ ಮತ್ತು ಈ ನೀರು ಸ್ನಾನ ಮಾಡಲು, ಕುಡಿಯಲು ಯೋಗ್ಯವಿಲ್ಲ ಎಂಬ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (NGT-National Green Tribunal) ವರದಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ತಳ್ಳಿಹಾಕಿದ್ದಾರೆ.
ಮುಖ್ಯಮಂತ್ರಿಯವರ ಪ್ರಕಾರ, ಗಂಗಾ ಮತ್ತು ಯಮುನಾ ನದಿಗಳು ಸಂಗಮದಲ್ಲಿ ಸೇರುವ ಸ್ಥಳದಲ್ಲಿ ನೀರು ಶುದ್ಧವಾಗಿದೆ. ತ್ರಿವೇಣಿ ಸಂಗಮದ ನೀರು ಸ್ನಾನ ಮಾಡಲು ಮಾತ್ರವಲ್ಲ, ಕುಡಿಯಲು ಕೂಡ ಯೋಗ್ಯವಾಗಿದೆ ಎಂದು ಅವರು ಹೇಳಿದ್ದಾರೆ.