Washington: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ತಾಮ್ರದ ಆಮದು ಮೇಲಿನ ಸುಂಕವನ್ನು ಶೇ. 50ರಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಇನ್ನು ಒಂದು ವರ್ಷದ ನಂತರ, ಅಮೆರಿಕ ಆಮದುಮಾಡುವ ಔಷಧಗಳ ಮೇಲೆ ಶೇ. 200ರಷ್ಟು ಸುಂಕ ವಿಧಿಸುವ ಸಾಧ್ಯತೆ ಇದೆ (copper, pharmaceuticals) ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹೊಸ ಸುಂಕಗಳು ಆಗಸ್ಟ್ 1ರಿಂದ ಜಾರಿಗೆ ಬರಲಿವೆ. ಆದರೆ ಈ ಗಡುವಿಗೆ ಯಾವುದೇ ವಿಸ್ತರಣೆ ನೀಡುವುದಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ. ಈ ನಿರ್ಧಾರದಿಂದ ಲೋಹಗಳ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ.
ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರು, ತಾಮ್ರದ ಸುಂಕ ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದಲ್ಲಿ ಜಾರಿಯಾಗಬಹುದು ಎಂದಿದ್ದಾರೆ. ಔಷಧಗಳು ಮತ್ತು ಅರೆವಾಹಕಗಳ ಕುರಿತ ಅಧ್ಯಯನಗಳು ಜುಲೈ ಅಂತ್ಯಕ್ಕೆ ಮುಕ್ತಾಯವಾಗಲಿದ್ದು, ನಂತರ ಹೊಸ ನೀತಿಗಳು ಘೋಷಣೆಯಾಗಲಿವೆ.
ಈಗಾಗಲೇ ಟ್ರಂಪ್ ಬಹುತೇಕ ಎಲ್ಲಾ ಆಮದು ಉತ್ಪನ್ನಗಳ ಮೇಲೆ ಶೇ. 10ರಷ್ಟು ಸುಂಕ ವಿಧಿಸಿದ್ದಾರೆ. ಜೊತೆಗೆ ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ ಹಲವು ರಾಷ್ಟ್ರಗಳಿಗೆ 25% ಸುಂಕ ಹಾಕಲಿದ್ದು, ಇನ್ನೂ ಕೆಲವು ರಾಷ್ಟ್ರಗಳಿಗೆ ಶೇ. 40ರಷ್ಟು ತನಕ ಸುಂಕ ವಿಧಿಸುವ ಚಿಂತನೆ ಇದೆ.
ಬ್ರಿಕ್ಸ್ ಮತ್ತು ಅದರ ಬೆಂಬಲಿಗ ರಾಷ್ಟ್ರಗಳಿಗೆ ಶೇ. 10 ಹೆಚ್ಚುವರಿ ತೆರಿಗೆ ವಿಧಿಸುವ ಬಗ್ಗೆ ಟ್ರಂಪ್ ಎಚ್ಚರಿಸಿದ್ದಾರೆ. ಈವರೆಗೆ ಅಮೆರಿಕ, ಬ್ರಿಟನ್, ವಿಯೆಟ್ನಾಂ ಮತ್ತು ಚೀನಾದೊಂದಿಗೆ ಮಾತ್ರ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ತಿಂಗಳಲ್ಲಿ ವಾಷಿಂಗ್ಟನ್-ಚೀನಾ ನಡುವೆ ಮಹತ್ವದ ಮಾತುಕತೆ ನಿರೀಕ್ಷಿಸಲಾಗಿದೆ.