New York (USA) “ಭಾರತ ನಮ್ಮ ಉತ್ತಮ ವ್ಯಾಪಾರ ಪಾಲುದಾರನಲ್ಲ. ಇನ್ನು 24 ಗಂಟೆಗಳಲ್ಲಿ ಭಾರತದ ಮೇಲೆ ಸುಂಕ (tariffs) ಹೆಚ್ಚಿಸುತ್ತೇನೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Trump) ತಿಳಿಸಿದ್ದಾರೆ.
ಅವರು ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, “ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಈ ಮೂಲಕ ರಷ್ಯಾ-ಉಕ್ರೇನ್ ಯುದ್ಧಕ್ಕೆ ಪ್ರೋತ್ಸಾಹ ನೀಡುತ್ತಿದೆ” ಎಂದು ಆರೋಪಿಸಿದರು. ಭಾರತ ಇತರ ರಾಷ್ಟ್ರಗಳಿಗಿಂತ ಹೆಚ್ಚು ಸುಂಕ ವಿಧಿಸುತ್ತದೆ ಎಂದು ಆರೋಪಿಸುತ್ತಾ, “ಅವರು ನಮ್ಮಿಂದ ಹೆಚ್ಚು ವ್ಯವಹಾರ ಮಾಡುತ್ತಾರೆ, ಆದರೆ ನಾವು ಅವರಿಂದ ಹೆಚ್ಚು ಮಾಡುತ್ತಿಲ್ಲ. ಹಾಗಾಗಿ 25% ಸುಂಕ ಹೆಚ್ಚಿಸುತ್ತೇನೆ” ಎಂದರು.
ಇದಕ್ಕೆ ಭಾರತೀಯ ವಿದೇಶಾಂಗ ಸಚಿವಾಲಯ ತೀವ್ರ ಪ್ರತಿಕ್ರಿಯೆ ನೀಡಿದ್ದು, “ಇದು ದ್ವಂದ್ವ ಮಾನದಂಡ. ಯುರೋಪ್ ಮತ್ತು ಅಮೆರಿಕ ಸಹ ರಷ್ಯಾ ಜೊತೆ ವ್ಯವಹಾರ ಮಾಡುತ್ತಿವೆ. ಭಾರತವೂ ತನ್ನ ಹಿತಾಸಕ್ತಿಗೆ ತಕ್ಕಂತೆ ತೈಲ ಖರೀದಿ ಮಾಡುತ್ತಿದೆ” ಎಂದು ಸ್ಪಷ್ಟಪಡಿಸಿದೆ.
ಭಾರತದ ಪ್ರತಿಕ್ರಿಯೆ: “ರಷ್ಯಾ ಜೊತೆ ವ್ಯಾಪಾರ ಮಾಡುವ ಹಕ್ಕು ಎಲ್ಲ ರಾಷ್ಟ್ರಗಳಿಗಿದೆ. ಇಂಧನ, ರಸಗೊಬ್ಬರ, ಲೋಹಗಳು, ಯಂತ್ರೋಪಕರಣಗಳಲ್ಲಿ ಯುರೋಪ್-ರಷ್ಯಾ ವ್ಯಾಪಾರ ಮುಂದುವರಿದಿದೆ. ಭಾರತ ಮಾತ್ರ ಗುರಿಯಾಗುವುದು ನ್ಯಾಯವಲ್ಲ” ಎಂದು ಹೇಳಿದೆ.
ಅಮೆರಿಕ ಪ್ರವೇಶಕ್ಕಾಗಿ ವೀಸಾ ಪಡೆಯುವವರಿಗೆ ಹೊಸ ನಿಯಮ ತರಲು ಟ್ರಂಪ್ ಯೋಜನೆ ರೂಪಿಸಿದ್ದು, ಪ್ರವಾಸಿ ಅಥವಾ ವ್ಯವಹಾರ ವೀಸಾ ಪಡೆಯಲು $15,000 ಬಾಂಡ್ ಇಡುವ ಹೊಸ ಶರತ್ತು ಪರಿಚಯಿಸಿದ್ದಾರೆ. ವೀಸಾ ಅವಧಿ ಪೂರ್ತಿಯಾದ ಮೇಲೆ ವಲಸೆ ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.