ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 30 ದಿನಗಳೊಳಗೆ ಟ್ರಾನ್ಸ್‌ಜೆಂಡರ್ ಸೈನಿಕರನ್ನು (transgender soldiers) ಸೇನೆಯಿಂದ ಬೇರ್ಪಡಿಸಲು ಆದೇಶ ನೀಡಿದ್ದಾರೆ. ಈ ನಿರ್ಧಾರವು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಮಿಲಿಟರಿಗೆ ಸೇರುವುದನ್ನು ಅಥವಾ ಸೇವೆ ಸಲ್ಲಿಸುವುದನ್ನು ನಿಷೇಧಿಸುವಂತಾಗಿದೆ.
ಅಮೆರಿಕಾ ರಕ್ಷಣಾ ಇಲಾಖೆಯ ಪೆಂಟಗನ್ ಈ ವಿಷಯವನ್ನು ಘೋಷಣೆ ಮಾಡಿದ್ದು, ಫೆಬ್ರವರಿಯಲ್ಲಿ ಮಹಿಳಾ ಕ್ರೀಡೆಗಳಲ್ಲಿ ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳ ಪ್ರವೇಶವನ್ನು ನಿಷೇಧಿಸಿದ ನಂತರ, ಇದೀಗ ಸೇನೆಯಿಂದಲೂ ಅವರನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಲಾಗಿದೆ. ವಿನಾಯಿತಿ ಇಲ್ಲದೆ, 30 ದಿನಗಳ ಒಳಗೆ ಈ ನಿರ್ಧಾರವನ್ನು ಜಾರಿಗೆ ತರಲಾಗುವುದು ಎಂದು ಪೆಂಟಗನ್ ಪ್ರಕಟಿಸಿದೆ.